Home » ಲಾರಿಗೆ ಕಾರು ಡಿಕ್ಕಿ : ಐವರು ಸ್ಥಳದಲ್ಲೇ ಮೃತ್ಯು
 

ಲಾರಿಗೆ ಕಾರು ಡಿಕ್ಕಿ : ಐವರು ಸ್ಥಳದಲ್ಲೇ ಮೃತ್ಯು

by Kundapur Xpress
Spread the love

ಹುಬ್ಬಳ್ಳಿ : ಲಾರಿಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅವಘಾತದಲ್ಲಿ ಹಸೆಮಣೆ ಏರಿ ಮದುವೆ ಸಂಭ್ರಮ ಅನುಭವಿಸಬೇಕಿದ್ದ ವಧು ಸೇರಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ಹುಬ್ಬಳ್ಳಿ ಬಳಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮೂರಕ್ಕೆ ಗ್ರಾಮದಲ್ಲಿ ಸೋಮವಾರ ಮದುವೆ ನಿಶ್ಚಿತಾರ್ಥ ಕಾರ್ಯ ಮುಗಿಸಿಕೊಂಡು ಮರಳಿ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಕುಳಗೇರಿಗೆ ತೆರಳುತ್ತಿದ್ದ ವೇಳೆ ಹುಬ್ಬಳ್ಳಿ ಸಮೀಪದ ಕಿರೇಸೂರ ಬಳಿ ಈ ಭೀಕರ ಅಪಘಾತ ನಡೆದಿದೆ. ಎದುರಿಗೆ ಬರುತ್ತಿದ್ದ ಲಾರಿಗೆ ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!