Home » ಬಸ್‌ಗಳ ನಡುವೆ ಅಪಘಾತ
 

ಬಸ್‌ಗಳ ನಡುವೆ ಅಪಘಾತ

by Kundapur Xpress
Spread the love

ಕಾರ್ಕಳ : ಮಂಗಳೂರಿನಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೆ ಮುಂಬಯಿಗೆ ಹೋಗುವ ಬಸ್ ಡಿಕ್ಕಿಯಾದ ಘಟನೆ ಪರ್ಪಲೆ ಕುಂಟಲ್ಪಾಡಿಯಲ್ಲಿ ನಡೆದಿದೆ. ಕಾರ್ಕಳದಿಂದ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ಹೋಗುವ ಖಾಸಗಿ ಬಸ್, ಎದುರುಗಡೆಯಿಂದ ಬರುತ್ತಿದ್ದ ನಿಶಾಲ್ ಖಾಸಗಿ ಬಸ್‌ ಬಲಬದಿಗೆ ಡಿಕ್ಕಿ ಹೊಡಿದಿದೆ. ಇದರ ಪರಿಣಾಮವಾಗಿ ಹಿಂಭಾಗದ ಸೀಟಿನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಿಂದಾಗಿ ಖಾಸಗಿ ಬಸ್‌ ಹಿಂಭಾಗ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್‌ನಲ್ಲಿ ಕರೆದೊಯ್ಯಲಾಯಿತು. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!