Home » ಬೈಕಿಗೆ ಕಾರು ಡಿಕ್ಕಿ : ಸವಾರರು ಆಸ್ಪತ್ರೆಗೆ
 

ಬೈಕಿಗೆ ಕಾರು ಡಿಕ್ಕಿ : ಸವಾರರು ಆಸ್ಪತ್ರೆಗೆ

by Kundapur Xpress
Spread the love

ಕುಂದಾಪುರ : ಕುಂದಾಪುರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಕಾರು ತ್ರಾಸಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ ಬಳಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ

ಕಾರಿನ ಚಾಲಕನು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ತ್ರಾಸಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ ಬಳಿ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸುನೀಲ್‌ ರಾಜ್‌ ಹಾಗೂ ಸಹ ಸವಾರ ನಾರಾಯಣ ಇಬ್ಬರೂ ರಸ್ತೆಗೆ ಬಿದ್ದು ಸುನೀಲ್‌ ರಾಜ್‌ ಅವರ ಎದೆಗೆ, ಎಡಭುಜಕ್ಕೆ ಹಾಗೂ ನಾರಾಯಣರವರ ಕಾಲಿಗೆ ಗಾಯವಾಗಿದ್ದು ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ

ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!