ಮಂಗಳೂರು : ಇಲ್ಲಿನ ಲೇಡಿಹಿಲ್‌ನ ನಾರಾಯಣಗುರು ವೃತ್ತದ ಬಳಿ ಶನಿವಾರ ಸಂಜೆ ಚಲಿಸುತ್ತಿದ್ದ ಸ್ವಿಫ್ಟ್ ಕಾರೊಂದಕ್ಕೆ ಬೆಂಕಿ ತಗಲಿದ್ದು, ಕಾರಿನ ಮುಂಭಾಗ ಬಹುತೇಕ ಸುಟ್ಟು ಕರಕಲಾಗಿದೆ.
ಕೊಟ್ಟಾರದಿಂದ ಮಣ್ಣಗುಡ್ಡ ಕಡೆಗೆ ಚಲಿಸುತ್ತಿದ್ದ ಕಾರು ನಾರಾಯಣಗುರು ವೃತ್ತದ ಬಳಿಯ ವಿಕ್ಟೋರಿಯಾ ಶಾಲೆ ಮುಂಭಾಗಕ್ಕೆ ತಲುಪುತ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಚಾಲಕ ಒಬ್ಬರೇ ಇದ್ದುದರಿಂದ ಕೂಡಲೇ ಕಾರು ನಿಲ್ಲಿಸಿ ಇಳಿದು ಅಪಾಯದಿಂದ ಪಾರಾಗಿದ್ದಾರೆ ಸ್ಥಳಕ್ಕೆ ಕದ್ರಿ ಅಗ್ನಿಶಾಮಕ ಠಾಣೆಯ ಸಿಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎನ್‌ಜಿ ಇಂಧನದಿಂದ ಕಾರು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಅವಗಢ ಸಂಭವಿಸಿದೆ