Home » ನಾಯಿಗೆ ಹಿಂಸೆ : ಸುಬ್ರಹ್ಮಣ್ಯ ಶೇರಿಗಾರ್‌ ವಿರುದ್ದ ದೂರು ದಾಖಲು
 

ನಾಯಿಗೆ ಹಿಂಸೆ : ಸುಬ್ರಹ್ಮಣ್ಯ ಶೇರಿಗಾರ್‌ ವಿರುದ್ದ ದೂರು ದಾಖಲು

by Kundapur Xpress
Spread the love

ಕುಂದಾಪುರ : ಬೈಂದೂರಿನ ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀವಂತ ನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಬೈಕ್ ಸವಾರ ಸುಬ್ರಹ್ಮಣ್ಯ ಪಡುವರಿ ವಿರುದ್ಧ ಬೈಂದೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ರಾವುತನಕಟ್ಟೆಯಿಂದ ನಾಯಕನಕಟ್ಟೆ ಸೇತುವೆ ತನಕ ಸೂಮಾರು 2 ಕೀ ಮೀ  ನಾಯಿಯನ್ನು ಸರಪಣಿಯಿಂದ ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ

 

Related Articles

error: Content is protected !!