ಸಿದ್ದಾಪುರ : ಶಂಕರನಾರಾಯಣ ಗ್ರಾಮದ ಕಯ್ಯಾಣಿಗೆ ಹೋಗುವ ರಸ್ತೆಯ ಬಳಿ ನೂತನವಾಗಿ ನಿರ್ಮಿಸಿದ ವಿದ್ಯುತ್ ಕಂಬದ ಮೇಲೆ ಹತ್ತಿ ಲೈನ್ ಎಳೆಯುತ್ತಿರುವಾಗ ಪೀಡ್ಸ್ ಕಾಯಿಲೆ ಬಂದ ಕಾರಣ ಸುಮಾರು 21 ಅಡಿಯ ಮೇಲಿನಿಂದ ಕೆಳಗೆ ಬಿದ್ದು ಲೈನ್‌ಮನ್ ಲಕ್ಷ್ಮಣ (30 ವರ್ಷ) ಎಂಬವರು ಮೃತಪಟ್ಟಿದ್ದಾರೆ
ಶೇಡಿಮನೆ ಗ್ರಾಮದ ಅವಳಿ ಸಹೋದರರಾದ ರಾಮ (30 ವರ್ಷ) ಮತ್ತು ಲಕ್ಷ್ಮಣ (30 ವರ್ಷ) ಅವರು ವಿದ್ಯುತ್ ಲೈನ್ ಎಳೆಯುವ ಕೆಲಸ ಮಾಡುತ್ತಿದ್ದರು. ಕಲ್ಯಾಣಿ ಬಳಿ ಹೊಸದಾಗಿ ವಿದ್ಯುತ್ ಕಂಬದ ಮೇಲೆ ಹತ್ತಿ ಲೈನ್ ಎಳೆಯುವಾಗ ಪಿಡ್ಸ್ ಬಂದು ಕೆಳಗೆ ತಲೆಕೆಳಗಾಗಿ ಬಿದ್ದಿದ್ದರು.