145
ಕುಂದಾಪುರ : ಆ.15ರಂದು ಬೈಂದೂರಿನ ಶಿರೂರಿನಲ್ಲಿ ಗಾಳಿಮಳೆಯ ಅಬ್ಬರಕ್ಕೆ ಮರ ಬೈಕ್‌ನ ಮೇಲೆ ಉರುಳಿದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರ ರಾಮ(52) ಚಿಕಿತ್ಸೆಗೆ ಸ್ಪಂದಿಸದ ಮೃತಪಟ್ಟಿದ್ದಾರೆ.
ಸ್ನೇಹಿತ ಚಂದ್ರ ಅವರೊಂದಿಗೆ ಮೀನು ಹಿಡಿಯಲು ಈ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆ ಶಿರೂರು ಕಳಿಹಿತ್ಲು ಎಂಬಲ್ಲಿ = ವಿಪರೀತ ಗಾಳಿ ಮಳೆಗೆ ಮರ ಉರುಳಿ ಬೈಕ್ ಮೇಲೆ ಬಿದ್ದಿತ್ತು. ಇಬ್ಬರೂ ಗಾಯಗೊಂಡಿದ್ದು, ರಾಮ ಅವರನ್ನು ಚಿಕಿತ್ಸೆಗಾಗಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

