Home » ಡಕಾಯಿತಿ ತಂಡದಿಂದ ದರೋಡೆ
 

ಡಕಾಯಿತಿ ತಂಡದಿಂದ ದರೋಡೆ

ಮಂಗಳೂರು - ಉಳಾಯಿಬೆಟ್ಟು

by Kundapur Xpress
Spread the love

ಡಕಾಯಿತಿ ತಂಡದಿಂದ ದರೋಡೆ

ಮಂಗಳೂರು – ಉಳಾಯಿಬೆಟ್ಟು

ಮಂಗಳೂರು : ಮಂಗಳೂರು ನಗರದ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ಡಕಾಯಿತಿ ತಂಡವೊಂದು ನುಗ್ಗಿದ್ದು ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ನಗ-ನಗದು ದರೋಡೆ ಮಾಡಿದೆ.

ಪಿಡಬ್ಲ್ಯುಡಿ ಗುತ್ತಿಗೆದಾರ ಉಳಾಯಿಬೆಟ್ಟುವಿನ ನಿವಾಸಿ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದ  8 ರಿಂದ 9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8.00 ಗಂಟೆಗೆ ಮನೆಯವರಿಗೆ ಚೂರಿ ತೋರಿಸಿ ಬೆದರಿಸಿದೆ ಬಳಿಕ ಮನೆಯವರನ್ನೆಲ್ಲ ಬೆಡ್‌ಶೀಟ್ನಿಂದ ಕಟ್ಟಿ ಹಾಕಿ ಪದ್ಮನಾಭ ಕೋಟ್ಯಾನ್ ಅವರ ಬಲಗೈಗೆ ಚೂರಿಯಿಂದ ಇರಿದಿದೆ

ನಮ್ಮೊಂದಿಗೆ ಎಲ್ಲರೂ ಸಹರಿಸಬೇಕು. ಮನೆಯಲ್ಲಿ ಹಣವಿದೆಯೇ ಎಂದು ನೋಡುತ್ತೇವೆ ಎಂದು ದರೋಡೆಕೋರ ತಂಡ ಮನೆಯೆಲ್ಲ ಜಾಲಾಡಿ ಕೈಗೆ ಸಿಕ್ಕಿದ ಹಣ, ಒಡವೆಗಳನ್ನು ದೋಚಿ ಅಲ್ಲಿಂದ ಕಾಲ್ಕಿತ್ತಿದೆ. ಹೋಗುವಾಗ ಮನೆಯ ಮಾಲೀಕ ಪದ್ಮನಾಭ ಕೋಟ್ಯಾನ್ರವರ ವಾಹನವನ್ನು ತೆಗೆದುಕೊಂಡು ಹೋಗಿದ್ದು ಮನೆಯಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ಬಿಟ್ಟು ತಂಡ ಪರಾರಿಯಾಗಿದೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ

   

Related Articles

error: Content is protected !!