ಹುಬ್ಬಳ್ಳಿ : ಡಕಾಯಿತಿ ನಡೆಸುತ್ತಿದ್ದ ಚೆಡ್ಡಿ ಗ್ಯಾಂಗನ್ನು ಸೆರೆ ಹಿಡಿಯಲು ಸ್ಥಳಕ್ಕೆ ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರ ಕಾಲಿಗೆ ಗುಂಡು ಹೊಡೆದು ಸರೆಹಿಡಿದ ಘಟನೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಕರನೋಲ್ ಜಿಲ್ಲೆ ಡಕಾಯಿತಿ ಗ್ಯಾಂಗ್ ಸದಸ್ಯ ಪಾಲ್ ವೆಂಕಟೇಶ್ವರಾವ್ (ಅಲಿಯಾಸ್ ಕಲ್ಯಾಣಕುಮಾರ) ಬಂಧಿತ ಆರೋಪಿ ಈ ಕಾರ್ಯಾಚರಣಿಯಲ್ಲಿ ವಿದ್ಯಾಗಿರಿ ಸಬ್ ಇನ್ಸಪೆಕ್ಟರ್ ಪ್ರಮೋದ ಹಾಗೂ ಸಿಬ್ಬಂದಿ ಆನಂದ ಬಡಿಗೇರ ಎಂಬವರಿಗೆ ಗಾಯಗಾಳಾಗಿದ್ದು ನಗರದ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣದ ಹಿನ್ನಲೆ :
ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನವಲೂರ ಗ್ರಾಮ ಹೊರವಲಯದಲ್ಲಿರುವ ವಿಕಾಸ್ ಕುಮಾರ ಎಂಬುವರ ಮನೆ ಬಾಗಿಲು ರಾತ್ರಿ 3.00 ಗಂಟೆಯ ಸುಮಾರಿಗೆ ದೊಡ್ಡ ಕಲ್ಲಿನಿಂದ ಒಡೆದ ಐವರ ತಂಡ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ
ಆಗ ಮನೆಯ ಸಿಬ್ಬಂದಿ ಪೊಲೀಸರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಿದರು ತಕ್ಷಣ ವಿದ್ಯಾಗಿರಿ ಪೊಲೀಸರು ಹಾಗೂ ರಾತ್ರಿಗಸ್ತು ಪೊಲೀಸರು ಕಾರ್ಯಪ್ರವೃತರಾಗಿ ಸ್ಥಳಕ್ಕೆ ಭೇಟಿ ನೀಡಿ ಪಾಲ ವೆಂಕಟೇಶ್ವರಾವ್ ಆತನನ್ನು ಬಂಧಿಸಿದ್ದಾರೆ. ಇತನ ವಿಚಾರಣೆ ನಡೆಸಿದಾಗ ನವಲೂರ ಕೈಗಾರಿಕಾ ಪ್ರದೇಶದಲ್ಲಿ ತಪ್ಪಿಸಿಕೊಂಡು ಉಳಿದ ಡಕಾಯಿತಿ ಗ್ಯಾಂಗ್ ಸದಸ್ಯರು ಅಲ್ಲಿ ಸೇರುವುದಾಗಿ ಯೋಜನೆ ರೂಪಿಸಿರುವುದು ಪೊಲೀಸ್ ಮುಂದೆ ಬಾಯಿ ಬಿಟ್ಟಿದ್ದರು ಪಿಎಸ್‌ಐ ಪ್ರಮೋದ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಉಳಿದ ಆರೋಪಗಳ ಬಂಧನಕ್ಕೆ ಬಲೆ ಬಿಸಿದೆ ಆಗ ಆರೋಪಿ ಪಾಲ ವೆಂಕಟೇಶ್ವರಾವ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪಿಎಸ್‌ಐ ಪ್ರಮೋದ ಗಾಳಿಯಲ್ಲಿ ಒಂದು ಗುಂಡು ಹೊಡೆದಿದ್ದು ಇದಕ್ಕೂ ಸ್ಪಂದಿಸದಿದ್ದಾಗ ಎರಡು ಗುಂಡು ಕಾಲಿಗೆ ಹೊಡೆದಿದ್ದಾರೆ.