ಕುಂದಾಪುರ : ಕುಂದಾಪುರ ಪುರಸಭಾ ವ್ಯಾಪ್ತಿಯ ಮಧ್ಯಕೋಡಿ ಎಂಬಲ್ಲಿ ಅಂಬರ್ಗ್ರೀಸ್ ಪತ್ತೆ ತನಿಖೆಗೆ ಆಗಮಿಸಿದ್ದ ಸಿಐಡಿ ಅರಣ್ಯ ಘಟಕದ ಮಂಗಳೂರು ವಿಭಾಗದ ಪೊಲೀಸ್ ಅಧಿಕಾರಿಗಳ ಮೇಲೆ ಮುಸ್ಲಿಂ ಗುಂಪಿನಿಂದ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಿಐಡಿ ಅರಣ್ಯ ಘಟಕದ ಮಂಗಳೂರು ಪಿಎಸ್ಐ ಜಾನಕಿ, ಸಿಬ್ಬಂದಿ ಹರೀಶ್ ಮತ್ತು ಜಗದೀಶ್ ಹಲ್ಲೆಗೊಳಗಾದ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳನ್ನು ಕುಂದಾಪುರ ಪೊಲೀಸರು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು
ಅಂಬರ್ಗ್ರಿಸ್ ಕಳ್ಳಸಾಗಾಣಿಕೆಯ ಮಾಹಿತಿಯ ಮೇರೆಗೆ ದಾಳಿ ನಡೆದಿತ್ತು. ಆರೋಪಿತರು ಕುಂದಾಪುರದ ಹೋಟೆಲ್ನಲ್ಲಿ ತಂಗಿರುವ ಹಾಗೂ ಅಂಬರ್ ಗ್ರಿಸ್ ಮಧ್ಯಕೋಡಿ ಅಂಗಡಿಯೊಂದರಲ್ಲಿ ಇರಿಸಿದ್ದ ಮಾಹಿತಿ ಮೇರೆಗೆ ತಂಡವು ಮಧ್ಯಕೋಡಿಯಲ್ಲಿನ ಸೌಹಾರ್ದ ಭವನ ಎದುರಿನ ಅಂಗಡಿಗೆ ದಾಳಿ ನಡೆಸಿದ್ದ ವೇಳೆ ಮುಸ್ಲಿಂ ಗುಂಪೊಂದು ಏಕಾಏಕಿ ತನಿಖೆಗೆ ಅಡ್ಡಿಪಡಿಸಿದ್ದಲ್ಲದೆ ಅಧಿಕಾರಿಗಳ ಮೇಲೆ, ಮುಗಿಬಿದ್ದು ಮೊಬೈಲ್ ಕಸಿದುಕೊಂಡು ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ ಪಿಎಸ್ಐ ಜಾನಕಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.