62
ಕಾರ್ಕಳ : ಬಜಗೋಳಿ- ಅಗ್ನಿಲಾ ಅನಿಮಲ್ ಕೇರ್ ಟ್ರಸ್ಟ್‌ನ ಗೋಶಾಲೆಯಲ್ಲಿ ಅನಾರೋಗ್ಯ ಪೀಡಿತ ಚಿಕಿತ್ಸೆಗಾಗಿ ಕಟ್ಟಿದ ಗೋವುಗಳ ಕಳ್ಳತನವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.
ಕಾರ್ಕಳದ ಹಲವಾರು ಭಾಗಗಳಲ್ಲಿ ಇಂತಹ ಅಕ್ರಮ ಗೋ ಕಳ್ಳರ ಅಟ್ಟಹಾಸ ದಿನೇ ದಿನೇ ಮಿತಿ ಮೀರಿದೆ, ಇಂತಹ ಮತಾಂಧ ಗೋಕಳ್ಳರಿಗೆ ಕಾನೂನಿನ ಅ ಭಯವೇ ಇಲ್ಲ.ಈ ಗೋಕಳ್ಳರ ದೊಡ್ಡ ಮಾಫಿಯಾ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಹಾಗಾಗಿ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗೋಕಳ್ಳರ ಮೂಲ ಹುಡುಕಿ ಎರಡು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆ ಹಾಗೂ ಗೋಕಳ್ಳರನ್ನು ಮಟ್ಟ ಹಾಕಬೇಕು. ಇಲ್ಲದಿದ್ದರೆ ಹಿಂಜಾವೇ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡಲಿದೆ ಎಂದು ಹಿಂಜಾವೆ ಕಾರ್ಕಳ ಘಟಕ ತಿಳಿಸಿದೆ.

