ಉಡುಪಿ : ಉಡುಪಿ ತಾಲೂಕಿನ ಶಿರೂರು ಗ್ರಾಮದ ಶ್ರೀ ಮಹಾಲಸ ನಾರಾಯಣಿ ದೇವಿ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ದೇವರಿಗೆ ಸಂಬಂಧಪಟ್ಟಂತ ಚಿನ್ನಾಭರಣವನ್ನು ಕಳವು ಮಾಡಿದ ಆರೋಪಿಗಳಿಗೆ ಉಡುಪಿ ನಗರದ ಪ್ರಧಾನ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ

2015ರ ಸಪ್ಟಂಬರ್ 21 ರಂದು ನರಸಿಂಹರಾಜು ಯಾನೆ ಬಸವರಾಜು ಯಾನೆ ರಾಜು ಮತ್ತು ಮೊಹಮ್ಮದ್ ಶಬ್ಬೀರ್ ಯಾನೆ ಶಬ್ಬೀರ್ ಎಂಬುವರು ಉಡುಪಿ ತಾಲೂಕು ಶಿರೂರು ಗ್ರಾಮದ ಶ್ರೀ ಮಹಾಲಸ ನಾರಾಯಣಿ ದೇವಿ ದೇವಸ್ಥಾನದ ಗರ್ಭಗುಡಿಯ ಬಾಗಿಲ ಬೀಗವನ್ನು ಮುರಿದು 8 ಲಕ್ಷದ 66 ಸಾವಿರದ 800 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಒಡವೆಗಳನ್ನು ಕಳವು ಮಾಡಿದ್ದರು ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಪ್ರಕರಣದ ತನಿಖೆಯನ್ನು ಕೈಗೊಂಡ ಅಂದಿನ ಜಿಲ್ಲಾ ಅಪರಾದ ಪತ್ತೆ ದಳದ (ಡಿ ಸಿ ಐ ಬಿ ) ನಿರೀಕ್ಷಕರಾದ ಜೈಶಂಕರ್ ಹಾಗೂ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬೆಂಗಳೂರಿನ ನೆಲಮಂಗಲದ ಟೋಲ್ಗೇಟ್ ಬಳಿ ದಸ್ತಗಿರಿ ಮಾಡಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹಿರಿಯಡಕ ಠಾಣೆಗೆ ಹಸ್ತಾಂತರಿಸಿದ್ದು ಹಿರಿಯಡಕ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತದ ಹಿನ್ನೆಲೆಯಲ್ಲಿ ನಗರದ ಪ್ರಧಾನ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ದೀಪ ರವರು ಆರೋಪಿಗೆ 4 ವರ್ಷ 2 ತಿಂಗಳು ಜೈಲು ಶಿಕ್ಷೆ ಹಾಗೂ 5500 ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ವಾದ ಮಂಡಿಸಿದ್ದಾರೆ

