224
ಕುಂದಾಪುರ : ಅಮಾಸೆಬೈಲು ಗ್ರಾಮದ ಕೆಲಾಸಾಲಿಮಕ್ಕೆ ಎಂಬಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗೆ ಅಮಾಸೆಬೈಲು ಪೊಲೀಸರು ದಾಳಿ ನಡೆಸಿ 10 ಮಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಸ್‌ಐ ಅಶೋಕ ಕುಮಾರ್ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಜುಗಾರಿ ನಿರತ ಗೋಪಾಲ ಪೂಜಾರಿ, ಗೋಪಾಲ ಕೊಠಾರಿ, ಕುಮಾರ ಪೂಜಾರಿ, ಸುರೇಶ್ ಕೊಠಾರಿ, ಉದಯ ಪೂಜಾರಿ, ಶಂಕರ ಪೂಜಾರಿ, ಸುರೇಂದ್ರ ನಾಯ್ಕ, ಉದಯ ನಾಯ್ಕ ಎಂಬವರನ್ನು ವಶಕ್ಕೆ ತೆಗೆದು 4 ಮೊಬೈಲ್ ಮತ್ತು ಇಸ್ಪೀಟ್ ಎಲೆ ಸ್ವಾಧೀನಪಡಿಸಿ . 9450 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

