222
ಬೆಂಗಳೂರು : ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಕಾರ್ಯಕರ್ತರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಉಗ್ರ ಸಂಘಟನೆ ಪರ ಪ್ರಚಾರ ಮಾಡುತ್ತಿದ್ದ ಆರೋಪದ ಮೇರೆಗೆ ಜಾರ್ಖಂಡ್ ಮಹಿಳೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಶಮಾ ಪರ್ವೀನ್ ಅನ್ಸಾರಿ (30) ಬಂಧಿತೆ. ಮಂಗಳವಾರ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಹೆಬ್ಬಾಳದಲ್ಲಿ ಕಾರ್ಯಾ ಚರಣೆ ಕೈಗೊಂಡು ಶಮಾ ಪರ್ವೀನ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತನ್ನ ಸಹೋದರನೊಂದಿಗೆ ಕಳೆದ ಮೂರು ವರ್ಷಗಳಿಂದಲೂ ಬೆಂಗಳೂರಿನ ಮನೋರಾಯನ ಪಾಳ್ಯದಲ್ಲಿ ವಾಸವಿದ್ದಳು. ಆರೋಪಿ ಶಮಾ ಪರ್ವೀನ್ ಸಹ ಪದವೀಧರೆಯಾಗಿದ್ದು, ಸದ್ಯ ನಿರ್ದಿಷ್ಟ ಉದ್ಯೋಗ ಇರಲಿಲ್ಲ.

