ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆಯಲ್ಲಿ 7ನೇ ಆರೋಪಿಯಾಗಿರುವ ಅನು ಅಲಿಯಾಸ್ ಅನುಕುಮಾರ್ ತಂದೆ ಚಂದ್ರಣ್ಣ (60ವರ್ಷ) ಶುಕ್ರವಾರ ಸಂಜೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿರುವ ವಿಚಾರ ತಿಳಿಯುತ್ತಿದ್ದಂತೆ ಚಂದ್ರಣ್ಣ ಸಹಜವಾಗಿ ಆತಂಕಗೊಂಡಿದ್ದರು. ಸಂಜೆ ಇದ್ದಕ್ಕಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಮಾರ್ಗ ಮಧ್ಯೆಯೇ ಅಸು ನೀಗಿದ್ದಾರೆ. ಲೋ ಬಿಪಿಯಿಂದಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ