Home » ಅತ್ಯಾಚಾರ ಪ್ರಕರಣ : ಕಾಂಗ್ರೆಸ್ ಸಂಸದ ಸೆರೆ
 

ಅತ್ಯಾಚಾರ ಪ್ರಕರಣ : ಕಾಂಗ್ರೆಸ್ ಸಂಸದ ಸೆರೆ

ರಾಕೇಶ್ ರಾಥೋಡ್ ಬಂಧನ

by Kundapur Xpress
Spread the love

 ಅಲಹಾಬಾದ್ : ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೆ ಅವರನ್ನು ಗುರುವಾರ ಅವರ ನಿವಾಸದಿಂದ ಬಂಧಿಸಲಾಗಿದೆ. ರಾಥೋಡ್ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಕೊಟ್ಟಾಲಿ ನಗರ ಪೊಲೀಸರು ಅವರ ನಿವಾಸಕ್ಕೆ ತಲುಪಿದಾಗ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಾಲ್ಕು ವರ್ಷಗಳಿಂದ ರಾಥೋಡ್ ತನ್ನ ಮೇಲೆ ಪದೆಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಜನವರಿ 17 ರಂದು ರಾಥೋಡ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು

ಸಂತ್ರಸ್ತೆಯನ್ನು ಮದುವೆಯಾಗಿ ತನ್ನ ರಾಜಕೀಯ ವೃತ್ತಿ ಜೀವನ ನಡೆಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ. ಸಂಸದ ರಾಥೋಡ್ ಜತೆಗೆ ಆಡಿದ ಕರೆ ವಿವರಗಳು ಮತ್ತು ಕರೆ ರೆಕಾರ್ಡಿಂಗ್ ಗಳನ್ನು ಪೊಲೀಸರೊಂದಿಗೆ ಸಂತ್ರಸ್ತೆ ಹಂಚಿಕೊಂಡಿದ್ದಾರೆ. ಕಳೆದ ವಾರ, ಸಂತ್ರಸ್ತೆ ಮಹಿಳೆಯ ಪತಿ ಐದು ವ್ಯಕ್ತಿಗಳ ವಿರುದ್ದ ಪ್ರತ್ಯೇಕ ದೂರು ದಾಖಲಿಸಿದ್ದು, ರಾಥೋಡ್ ಮತ್ತು ಅವರ ಮಗ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

Related Articles

error: Content is protected !!