Home » ಚೂರಿ ಇರಿತ ಆಸ್ಪತ್ರೆಗೆ ದಾಖಲು
 

ಚೂರಿ ಇರಿತ ಆಸ್ಪತ್ರೆಗೆ ದಾಖಲು

by Kundapur Xpress
Spread the love

ಕುಂದಾಪುರ : ನಗರದ ಚಿಕನ್ ಸಾಲ್ ರಸ್ತೆಯ ಪೋಸ್ಟ್ ಆಫೀಸ್ ಬಳಿಯ ನ್ಯೂ ಡೆಲ್ಲಿ ಬಜಾರ್ ಎದುರುಗಡೆ ವ್ಯಕ್ತಿಯೊಬ್ಬರಿಗೆ ಭಾನುವಾರ ರಾತ್ರಿ 8.00 ಗಂಟೆಯ ಸುಮಾರಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ ಚೂರಿ ಇರಿತಕ್ಕೆ ಒಳಗಾದ ರಾಘವೇಂದ್ರ ಶೇರಿಗಾರ್‌ ಯಾನೆ ಬನ್ಸ್‌ ರಾಘು ಎಂಬಾತನನ್ನು ತಕ್ಷಣ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಯಿತು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಕಾರಿಗೆ ಸೈಡ್ ನೀಡುವ ವಿಚಾರದಲ್ಲಿ ಮಾತಿನ ಚಕ್ಕಮುಕಿ ನಡೆದಿದ್ದು ನಂತರ ಇದ್ದಕ್ಕಿದ್ದಂತೆ ವ್ಯಾಗನರ್‌ ಕಾರಿನಲ್ಲಿದ್ದ ಅಪರಿಚಿತ ವ್ಯಕ್ತಿಯೊರ್ವ ಚೂರಿಯಿಂದ ಬನ್ಸ್‌ ರಾಘುಗೆ ಇರಿದು ಅದೇ ಕಾರಿನಲ್ಲಿ ಪರಾರಿಯಾಗಿದ್ದಾನೆ ಸ್ಥಳಕ್ಕೆ ಡಿ ವೈ ಎಸ್‌ ಪಿ ಬೆಳ್ಳಿಯಪ್ಪ ವೃತ್ತ ನಿರೀಕ್ಷಕರಾದ ನಂದಕುಮಾರ್‌ ಹಾಗೂ ಠಾಣಾಧಿಕಾರಿ ವಿನಯ್‌ ಕೊರ್ಲಹಳ್ಳಿ ಭೇಟಿ ನೀಡಿ ಪರಿಶೀಲಿಸಿದ್ದಾರೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!