81
ಬೈಂದೂರು : ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹಡ್ಡಿನಗದ್ದೆ ಎಂಬಲ್ಲಿ ಗೋಡೌನ್ ಬಾಗಿಲಿನ ಬೀಗ ಮುರಿದು ದಾಸ್ತಾನು ಇರಿಸಲಾಗಿದ್ದ 200 ಅಡಿಕೆ ಚೀಲ ಕಳವಾಗಿದ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ಕಳ ಮೂಲದ ಮಸೂದ್ ಪಟೇಲ್ (74) ಎಂಬವರು ಬೈಂದೂರಿನಲ್ಲಿರುವ ತಮ್ಮ 60 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು, ಹಲಸು, ಮಾವು, ರಬ್ಬರ್ ಸೇರಿದಂತೆ ಇತರ ಬೇರೆ ಬೇರೆ ಕೃಷಿ ಮಾಡಿಕೊಂಡಿದ್ದರು.
ಇದನ್ನು ನೋಡಿಕೊಳ್ಳಲು ಕಡಬ ತಾಲೂಕಿನ ನೂಜಿ ಬಾಳ್ತಿಲಾ ಸಂತೋಷ್ ಎನ್ನುವವರನ್ನು ನೇಮಿಸಲಾಗಿತ್ತು. ಸಂತೋಷ್ ಈ ವರ್ಷ ಬೆಳೆದಿದ್ದ ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿ ಗೋಡೌನ್‌ನಲ್ಲಿ ಇಟ್ಟು ಬೀಗ ಹಾಕಿ, ಮೇ 15ರಂದು ತಮ್ಮ ಊರಿಗೆ ಹೋಗಿದ್ದರು. ಬಳಿಕ ಗೋಡೌನ್ ನಲ್ಲಿ ಬಂದು ನೋಡಿದಾಗ 200 ಅಡಿಕೆ ಚೀಲವನ್ನು ಯಾರೋ ಕಳ್ಳರು ಕದ್ದಿರುವುದು ಗಮನಕ್ಕೆ ಬಂದಿದೆ.

