Home » ತಪಾಸಣೆ ವೇಳೆ ಬೈಕ್‌ ಕಳ್ಳನ ಪತ್ತೆ
 

ತಪಾಸಣೆ ವೇಳೆ ಬೈಕ್‌ ಕಳ್ಳನ ಪತ್ತೆ

by Kundapur Xpress
Spread the love

ಉಡುಪಿ : ಹೆಲೈಟ್ ಹಾಕದವರನ್ನು ತಪಾಸಣೆ ಮಾಡುತ್ತಿದ್ದ ಪೋಲಿಸರಿಗೆ ಕಳವುಗೈದ ಬೈಕಿನ ಸಹಿತ ಆರೋಪಿಯು ಸಿಕ್ಕಿಬಿದ್ದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿರಣ್ (30) ಬಂಧಿತ ಆರೋಪಿ.

ದಶರಥನಗರ ಎಂಬಲ್ಲಿನ ಮಣಿಪಾಲ – ಅಲೆವೂರು ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿ ದ್ವಿಚಕ್ರ ವಾಹನದಲ್ಲಿ ತಲೆಗೆ ಶಿರಸ್ತ್ರಾಣ ಧರಿಸದೇ ಅಲೆವೂರು ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದು ಆತನನ್ನು ತಪಾಸಣೆ ಮಾಡಲು ನಿಲ್ಲುವಂತೆ ಸೂಚನೆ ನೀಡಿದಾಗ, ಸ್ವಲ್ಪ ದೂರ ಹೋಗಿ ನಿಂತು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದನು. ಈ ವೇಳೆ ವಶಕ್ಕೆ ಪಡೆದು ವಿಚಾರಿಸಿ ಬೈಕಿನ ದಾಖಲಾತಿಗಳನ್ನು ಪರಿಶೀಲನೆಗೆ ಹಾಜರುಪಡಿಸಿದಾಗ, ಆತನು ಮೋಟಾರು ಸೈಕಲ್‌ನ ದಾಖಲಾತಿ ಹಾಜರುಪಡಿಸದೇ, ಮೋಟಾರು ಸೈಕಲ್ ಯಾರದ್ದು ಎಂದು ಕೇಳಿದಾಗ ಯಾವುದೇ ಸಮರ್ಪಕವಾದ ಉತ್ತರ ನೀಡಿಲ್ಲ. ಹೀಗಾಗಿ ಇದೊಂದು ಕಳವು ಮಾಲು ಎಂದು ದೃಢೀಕರಿಸಿ ಪಿಎಸ್‌ಐ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Related Articles

error: Content is protected !!