Home » ಅಡಕೆ ಕಳ್ಳತನ : ನಾಲ್ವರ ಬಂಧನ
 

ಅಡಕೆ ಕಳ್ಳತನ : ನಾಲ್ವರ ಬಂಧನ

by Kundapur Xpress
Spread the love

ಕುಂದಾಪುರ : ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಸಂತೋಷ್ (35), ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಶಾನೂರು ಬಾಬುಲಾಲ್ ನವಾಜ್ ಯಾನೆ ಘಜಿ‌ (31), ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕು ಮುಠಳ್ಳಿ ಗ್ರಾಮದ ಖ್ವಾಜಾ ಯಾನೆ ಮಹಮ್ಮದ್ ಖ್ವಾಜಾ (26) ಹಾಗೂ ಮಹಮ್ಮದ್ ಸಾದಿಕ್ ಯಾನೆ ಸಾದಿಕ್ (27) ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು 455 ಕೆಜಿ ಅಡಿಕೆ ಹಾಗೂ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

 

Related Articles

error: Content is protected !!