Home » ಶಿವಮೊಗ್ಗ ಎನ್. ಅಣ್ಣಪ್ಪ‌ ನಿಧನ
 

ಶಿವಮೊಗ್ಗ ಎನ್. ಅಣ್ಣಪ್ಪ‌ ನಿಧನ

by Kundapur Xpress
Spread the love

ಕುಂದಾಪುರ :  ಶಿವಮೊಗ್ಗ ನಗರದ ಜೈಲ್‌ ರಸ್ತೆಯ ನಿವಾಸಿಯಾದ ನೀಲಪ್ಪನ ಮನೆ ಅಣ್ಣಪ್ಪ ಇಂದು ಮುಂಜಾನೆ ನಿಧನ ಹೊಂದಿದರು ಅವರಿಗೆ 51 ವರ್ಷ ವಯಸ್ಸಾಗಿತ್ತು

ಅವರು ಕಡಿಮೆ ರಕ್ತದೊತ್ತಡ ಹಾಗೂ ಕಾಲು ಗಾಯದ ವಿಷಮ ಸ್ಥಿತಿಯಿಂದ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು   ಚಿಕಿತ್ಸೆ ಪಡೆದು ಸ್ವಲ್ಪ ಆರಾಮದಾಯಕ ಸ್ಥಿತಿಯಲ್ಲಿದ್ದ ಅವರು ಇಂದು ಬೆಳಗಿನ ಜಾವ 4.00 ಗಂಟೆಯ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ

ಉದ್ಯಮಿಯಾದ ಅಣ್ಣಪ್ಪನವರು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಶಿವಮೊಗ್ಗದ ರಾಮಕ್ಷತ್ರಿಯ ಯುವಕ ಸಂಘದ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಪ್ರತಿ ವರ್ಷವೂ ಕೂಡ ರಾಮಕ್ಷತ್ರಿಯ ಸಮಾಜದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣಪತಿ ಹಬ್ಬವನ್ನು ವಿಶೇಷವಾಗಿ ಸಮಾಜದ ಪರವಾಗಿ ಆಚರಿಸುತ್ತಿದ್ದರು

ಅವರು ಪತ್ನಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ವರ್ಗ ಹಾಗೂ ಮಿತ್ರ ವರ್ಗವನ್ನುಅಗಲಿದ್ದಾರೆ

 

Related Articles

error: Content is protected !!