Home » “ನೆಕ್ಸ್ಟ್ – ಜನ್ ಎ.ಐ. ಟೂಲ್ಸ್: “ಟ್ರಾನ್ಸ್ಫಾರ್ಮಿಂಗ್” ಇನ್ನೋವೇಶನ್ ವಿಷಯದ ಕುರಿತು ಕಾರ್ಯಾಗಾರ
 

“ನೆಕ್ಸ್ಟ್ – ಜನ್ ಎ.ಐ. ಟೂಲ್ಸ್: “ಟ್ರಾನ್ಸ್ಫಾರ್ಮಿಂಗ್” ಇನ್ನೋವೇಶನ್ ವಿಷಯದ ಕುರಿತು ಕಾರ್ಯಾಗಾರ

by Kundapur Xpress
Spread the love

ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ “ನೆಕ್ಸ್ಟ್ ಜನ್ ಎ.ಐ. ಟೂಲ್ಸ್: ಟ್ರಾನ್ಸ್ಫಾರ್ಮಿಂಗ್ ಇನ್ನೋವೇಶನ್” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಏಪ್ರಿಲ್ 20ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಸ್ಕೂಲ್ ಆಫ್ ಐಟಿ ಸ್ಕಿಲ್ಸ್ ಎಂಎಸ್‌ಡಿಸಿ, ಮಣಿಪಾಲ ಇಲ್ಲಿನ ಸೆಂಟರ್ ಹೆಡ್ ಶ್ರೀಮತಿ ರಾಜಲಕ್ಷ್ಮಿ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳ ಮಹತ್ವ, ಅವುಗಳ ಬಳಕೆ ಹಾಗೂ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿಯನ್ನು ಒದಗಿಸಿದರು. ಇದೇ ಸಂದರ್ಭ ಮಾಹೆ, ಮಣಿಪಾಲದ ಸ್ಕೂಲ್ ಆಫ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪ್ರಿಯಾ ಕಾಮತ್ ಬಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್, ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ವಿಲ್ಮಾ ಶೆರಲ್, ಮೇಘಾ, ಶ್ರೀ ಮಹೇಶ್ ಪೂಜಾರಿ ಉಪಸ್ಥಿತರಿದ್ದರು.
ಬಿಸಿಎ ವಿಭಾಗದ ವಿದ್ಯಾರ್ಥಿಗಳಾದ ಮನಿಷಾ ಪ್ರಾರ್ಥಿಸಿ, ಅಪೂರ್ವಾ ಡಿ. ಸ್ವಾಗತಿಸಿ. ಸ್ಮಿತಾ ಮತ್ತು ನಿರೀಕ್ಷಾ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶಿಫಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೇಯಾ ವಂದಿಸಿದರು.

 

Related Articles

error: Content is protected !!