ಕೋಟೇಶ್ವರ : ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದ್ದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ 87 ಕ್ಕೆ 87 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡ 100 ಫಲಿತಾಂಶ ದ ಸಾಧನೆ ಮಾಡಿದ್ದು ಕನ್ನಡ ಮಾಧ್ಯಮದಲ್ಲಿ 35 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶಾಲೆಯ ಒಟ್ಟಾರೆ ಫಲಿತಾಂಶ ಶೇಕಡ 99.15 ಬಂದಿರುತ್ತದೆ
ಆಂಗ್ಲ ಮಾಧ್ಯಮದಲ್ಲಿ 625 ಕ್ಕೆ 615 ಅಂಕ ಪಡೆದ ವಿಶ್ರುತ ಶಾಲೆಗೆ ಪ್ರಥಮ 625 ಕ್ಕೆ 614 ಅಂಕ ಪಡೆದ ಜನ್ವಿತ ಶಾಲೆಗೆ ದ್ವಿತೀಯ 625ಕ್ಕೆ 596 ಅಂಕ ಪಡೆದ ಆಶ್ರೀತಾ ಎ ತೌಳ ತೃತೀಯ ಹಾಗೆ ಕನ್ನಡ ಮಾಧ್ಯಮದಲ್ಲಿ 625 ಕ್ಕೆ 540 ಅಂಕ ಪಡೆದ ಸಾನಿತ ಶಾಲೆಗೆ ಪ್ರಥಮ 625ಕ್ಕೆ 534 ಅಂಕ ಪಡೆದ ಕಿಶನ್ ದ್ವಿತೀಯ 625ಕ್ಕೆ 533 ಅಂಕ ಪಡೆದ ಪ್ರೀತಮ್ ಜಿ ತೃತೀಯ ಸ್ಥಾನ ಪಡೆದಿದ್ದು ವಿದ್ಯಾರ್ಥಿಗಳ ಈ ಸಾಧನೆಯನ್ನು ಉಪ ಪ್ರಾಂಶಪಾಲರಾದ ಚಂದ್ರಶೇಖರ್ ಶೆಟ್ಟಿ ಎಸ್ ಡಿ ಎಂ ಸಿ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ

