Home » ಎಕ್ಸಲೆಂಟ್ ಕುಂದಾಪುರ : ಶೇಕಡ 100% ಫಲಿತಾಂಶ.
 

ಎಕ್ಸಲೆಂಟ್ ಕುಂದಾಪುರ : ಶೇಕಡ 100% ಫಲಿತಾಂಶ.

by Kundapur Xpress
Spread the love

ಕುಂದಾಪುರ :2025-26 ರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ – 1 ರ ಫಲಿತಾಂಶವು ಪ್ರಕಟಗೊಂಡಿದ್ದು, ಈ ಸಾಲಿನ ಪರೀಕ್ಷೆಯಲ್ಲಿ ಎಕ್ಸಲೆಂಟ್ ಹೈಸ್ಕೂಲು, ಸುಣ್ಣಾರಿ, ಕುಂದಾಪುರಕ್ಕೆ ಅದ್ಭುತ ಫಲಿತಾಂಶ ಬಂದಿರುವುದು ಸಂಸ್ಥೆಯ ಗೌರವವನ್ನು ಹೆಚ್ಚಿಸಿದೆ. ಹತ್ತನೇಯ ತರಗತಿಯಲ್ಲಿ ಒಟ್ಟು ೨೮ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ ೧೦೦ ಫಲಿತಾಂಶವನ್ನು ಪಡೆದ ಹೆಮ್ಮೆಯ ವಿದ್ಯಾಸಂಸ್ಥೆಯಾಗಿದೆ. ಇದರಲ್ಲಿ ೦೯ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ೧೭ ಪ್ರಥಮ ಶ್ರೇಣಿ ಪಡೆಯುವುದರೊಂದಿಗೆ ಅತ್ಯುತ್ತಮ ಸಾಧನೆಯನ್ನು ಗಳಿಸಿದ್ದಾರೆ. ಈ ರೀತಿಯ ಉತ್ತಮ ಸಾಧನೆ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಎಕ್ಸಲೆಂಟ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರು, ಪ್ರಾಂಶುಪಾಲರಾದ ನಾಗರಾಜ ಶೆಟ್ಟಿಯವರು, ಎಕ್ಸಲೆಂಟ್ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿಯಾದ ಸರೋಜಿನಿ ಪಿ ಆಚಾರ್ಯ ರವರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

 

Related Articles

error: Content is protected !!