Home » ಬಿ.ಬಿ. ಹೆಗ್ಡೆ ಕಾಲೇಜು: ಕ್ಯೂ ಸ್ಪೈಡರ್ಸ್ ಮತ್ತು ಪ್ರೊ ಸ್ಪೈಡರ್ಸ್ ಕ್ಯಾಂಪಸ್ ನೇಮಕಾತಿ
 

ಬಿ.ಬಿ. ಹೆಗ್ಡೆ ಕಾಲೇಜು: ಕ್ಯೂ ಸ್ಪೈಡರ್ಸ್ ಮತ್ತು ಪ್ರೊ ಸ್ಪೈಡರ್ಸ್ ಕ್ಯಾಂಪಸ್ ನೇಮಕಾತಿ

by Kundapur Xpress
Spread the love

ಕುಂದಾಪುರ : ಕ್ಯೂ ಸ್ಪೆöÊಡರ್ಸ್ ಮತ್ತು ಪ್ರೊ ಸ್ಪೆöÊಡರ್ಸ್ ಸಂಸ್ಥೆಯು ಮೇ 2ರಂದು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಕಾರ್ಯಕ್ರಮವನ್ನು ನಡೆಸಿತು. ಎಲ್ಲಾ ಅಂತಿಮ ವರ್ಷದ ಬಿ.ಕಾಂ., ಬಿಬಿಎ ಮತ್ತು ಬಿಸಿಎ ವಿದ್ಯಾರ್ಥಿಗಳು ಭಾಗವಹಿಸಿದರು. ಸಂಸ್ಥೆಯ HR ಅಧಿಕಾರಿ ಕೃತಿಯವರು ವಿವಿಧ ಹುದ್ದೆಗಳು ಮತ್ತು ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ತಾಂತ್ರಿಕ ತರಬೇತುದಾರರಾದ ರೆಹ್ನಾ ರವರು ಭಾಗವಹಿಸಿದ್ದರು.
ಆಯ್ಕೆಯಾದ 33 ವಿದ್ಯಾರ್ಥಿಗಳಿಗೆ ಉದ್ಯೋಗ ಪತ್ರವನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು.
ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ ಶ್ರೀ ತಿಮ್ಮಪ್ಪ ಡಿ.ಎಸ್. ಸಂಸ್ಥೆಯ ಅಧಿಕಾರಿಗಳನ್ನು ಸ್ವಾಗತಿಸಿ, ವಂದಿಸಿದರು.

 

Related Articles

error: Content is protected !!