Home » ಯಡಾಡಿ-ಮತ್ಯಾಡಿ ಎನ್.ಎಸ್.ಎಸ್. ಶಿಬಿರದಲ್ಲಿ ಶ್ರಮದಾನ ಉದ್ಘಾಟನೆ
 

ಯಡಾಡಿ-ಮತ್ಯಾಡಿ ಎನ್.ಎಸ್.ಎಸ್. ಶಿಬಿರದಲ್ಲಿ ಶ್ರಮದಾನ ಉದ್ಘಾಟನೆ

by Kundapur Xpress
Spread the love

ಯಡಾಡಿ-ಮತ್ಯಾಡಿ : ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವು ಶ್ರೀ ವಿನಾಯಕ ಸಭಾಭವನ, ಯಡಾಡಿ – ಮತ್ಯಾಡಿಯಲ್ಲಿ ನಡೆಯಿತು. ಈ ವಿಶೇಷ ಶಿಬಿರದ ಶ್ರಮದಾನವನ್ನು ಉದ್ಘಾಟಿಸಿ, ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸುಬ್ಬಣ್ಣ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ದಿನೇಶ್ ಯಡಾಡಿ, ರಾಘವ್ ಶೆಟ್ಟಿ, ವಿಮಾ ಪ್ರತಿನಿದಿ ಹಳ್ನಿರು, ರಘುರಾಮ ಶೆಟ್ಟಿ ಯಡಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಸಂತೋಷ್ ಬೂದಾಡಿ, ಗೋಪಾಲ್, ಅರುಣ್, ಭಾಸ್ಕರ್ ಶೆಟ್ಟಿ ಮತ್ಯಾಡಿ, ರಾಘವೇಂದ್ರ ಪ್ರಭು ಗುಡ್ಡೆಯಂಗಡಿ ಉಪಸ್ಥಿತರಿದ್ದರು.
ಶಿಭಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂಸೇವಕರಾದ ಪ್ರಥಮ ಬಿ.ಸಿ.ಎ. ಪ್ರಸನ್ನ ಸ್ವಾಗತಿಸಿ, ದ್ವಿತೀಯ ಬಿ.ಕಾಂ. ಸುಶ್ಮಿತಾ ಶೆಟ್ಟಿ ವಂದಿಸಿ, ದ್ವಿತೀಯ ಬಿ.ಸಿ.ಎ. ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.

 

Related Articles

error: Content is protected !!