ಕುಂದಾಪುರ: ತಾಲೂಕು ಮಟ್ಟದ ಅಮೃತ ಯಾತ್ರೆಯ ಕಾರ್ಯಕ್ರಮವನ್ನು ಶಾಸಕರಾದ ಕಿರಣ್ ಕುಮಾರ ಕೊಡ್ಗಿಯವರು ಚಾಲನೆ ನೀಡಿದರು. ನಮ್ಮ ದೇಶವು ಉತ್ತಮ ಪರಿಸರ ಹವಾಗುಣ ಹೊಂದಿರಲು ಇಲ್ಲಿ ಮಣ್ಣಿನ ಗುಣ ಮುಖ್ಯವಾಗಿದೆ, ಅನೇಕ ಮಹಾತ್ಮರ ಹೋರಾಟದಿಂದ ಮತ್ತು ತ್ಯಾಗದಿಂದ ನಮ್ಮ ದೇಶ ಸ್ವಾತಂತ್ರ್ಯ ಪಡೆದು ಅಭಿವೃದ್ಧಿಯತ್ತ ಸಾಗುತ್ತಿದೆ,
ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿದ ಮಣ್ಣನ್ನು ಬಳಸಿಕೊಂಡು ದೆಹಲಿಯ ಕರ್ತವ್ಯ ಪದದ ಉದ್ದಕ್ಕೂ ಅಮೃತ್ ವಾಟಿಕ ಎಂಬ ಉದ್ಯಾನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಅಭಿಯಾನ ಹೊಂದಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿ ಯವರು ಹೇಳಿದರು.
ಸದ್ರಿ ಈ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಮತಿ ರಶ್ಮಿ, ಕುಂದಾಪುರ ಅಸಿಸ್ಟೆಂಟ್ ಕಮಿಷನರ್,, ಶ್ರೀಮತಿ ಶೋಭಾ ಲಕ್ಷ್ಮಿ ಕುಂದಾಪುರ ತಹಸೀಲ್ದಾರರು,, ತಾಲೂಕು ಆರೋಗ್ಯ ಅಧಿಕಾರಿ ಪ್ರೇಮಾನಂದ , ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ,,E,O, ಶಶಿಧರ್ ಕೆ.ಜಿ, ಸಿಡಿಪಿಓ,ಅನುರಾಧ, ಕುಂದಾಪುರ ಯುವ ಜನ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ,, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಅರುಣ್ ಕುಮಾರ್ ಶೆಟ್ಟಿ, ಹಾಗೂ. ಕಾಲೇಜಿನ ಪ್ರಿನ್ಸಿಪಾಲರು ಹಾಗೂ ಅಧ್ಯಾಪಕ ವೃಂದದವರು, ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.