Home » ಕನ್ನಡ ಸ್ವತಂತ್ರ ವೈಜ್ಞಾನಿಕ ಭಾಷೆ
 

ಕನ್ನಡ ಸ್ವತಂತ್ರ ವೈಜ್ಞಾನಿಕ ಭಾಷೆ

by Kundapur Xpress
Spread the love

ಕುಂದಾಪುರ : ಕನ್ನಡ ಭಾಷೆ ಬರೆದಂತೆ ನುಡಿಯುವ ವೈಜ್ಞಾನಿಕ ಸ್ವತಂತ್ರ ಭಾಷೆ.ಕನ್ನಡ ಭಾಷೆಯ ಮೇಲೆ ಸಂಸ್ಕೃತದ ಪ್ರಭಾವ ಇದ್ದರೂ ಕೂಡ ಅದು ಸಂಸ್ಕೃತ ಜನ್ಯವಲ್ಲ.ಜಾಗತಿಕ ಭಾಷೆ ಎನಿಸಿದ ಇಂಗ್ಲಿಷ್ ಅಂಬೆಗಾಲು ಇಕ್ಕುವಾಗ ಕನ್ನಡ ಭಾಷೆ ದಾಪುಗಾಲು ಇಟ್ಟು ನಡೆಯುವ ಭಾಷೆಯಾಗಿತ್ತು.ಈ ಕನ್ನಡ ಭಾಷೆ ನಮ್ಮೆಲ್ಲರ ಹೃದಯದ ಮಾತಾಗಬೇಕಿದೆ ಎಂದು ಕೋಟೇಶ್ವರದ ಪಬ್ಲಿಕ್ ಸ್ಕೂಲ್ ನ ಉಪನ್ಯಾಸಕ ಸುಧಾಕರ್ ಅಭಿಮತಿಸಿದರು.
ಅವರು ಕೋಟೇಶ್ವರ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಕನ್ನಡತನದ ಉಳಿವಿನ ಸಮಸ್ಯೆಗಳು” ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ವಾದ್ಯಗೋಷ್ಠಿ ಯೊಂದಿಗೆ ಕನ್ನಡಾಂಬೆ ಭುವನೇಶ್ವರಿ ಮಾತೆಯ ಭವ್ಯ ಮೆರವಣಿಗೆ ಮಾಡಿ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಅಧ್ಯಾಪಕರು ಪುಷ್ಪ ನಮನ ಸಲ್ಲಿಸಿದರು ಶ್ರಾವ್ಯ ಮತ್ತಿತರ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.

ಕನ್ನಡದ ಹೆಮ್ಮೆಯ ಕವಿ ಶ್ರೇಷ್ಠರ ನಾಡಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.ನಮ್ಮ ನಾಡು ನುಡಿಯ ಬಗ್ಗೆ ಕನ್ನಡ ಅಧ್ಯಾಪಕ ಭಾಷಾ ಸಾಹೇಬ್ ಮತ್ತು ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದ ಚಂದ್ರ ಶೇಖರ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು.ವಿಜ್ಞಾನ ಶಿಕ್ಷಕಿ ಸಂಧ್ಯಾರಾವ್ ಅವರು ಕನ್ನಡ ನುಡಿ ನಿಪುಣರ ಗೀತೆಗಳನ್ನು ಸೊಗಸಾಗಿ ಪ್ರಸ್ತುತ ಪಡಿಸಿದರು.ಸಂಸ್ಥೆಯ ಪ್ರಭಾರಿ ಪ್ರಾಚಾರ್ಯರಾದ ಸುಶೀಲಾ ಹೊಳ್ಳ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅನ್ಯಭಾಷೆಗಳನ್ನು ಗೌರಿವಿಸಿ ಮಾತ್ರಭಾಷೆ ಕನ್ನಡವನ್ನು ಹೃತ್ಪೂರ್ವಕ ವಾಗಿ ಪ್ರೀತಿಸುವ ಒಲವಿನ ಸಂಸ್ಕಾರ ನಮ್ಮದಾಗಬೇಕು.ನಮ್ಮತನಕ್ಕೆ ಒಗ್ಗದ ಆಂಟಿ ಅಂಕಲ್ ಸಂಸ್ಕೃತಿಯನ್ನು ಮೂಲೆಗೆಸೆಯಬೇಕಾದ ತುರ್ತು ನಮ್ಮ ಮುಂದಿದೆ ಎಂದು ಪ್ರತಿಪಾದಿಸಿದರು

ಕುಮಾರಿ ಸ್ಪೂರ್ತಿ ಸರ್ವರನ್ನು ಸ್ವಾಗತಿಸಿದರು.ಧರಣಿ ವಂದಿಸಿದರು.ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ರಮಾನಂದ ನಾಯಕ್,ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಸಹಕರಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರು,ಉಪನ್ಯಾಸಕರು,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂಸ್ಥೆಯ ಎನ್ ಎಸ್ ಎಸ್ ಸ್ವಯಂ ಸೇವಕರು  ಕಾರ್ಯಕ್ರಮ ಸಂಘಟಿಸಿದರು

   

Related Articles

error: Content is protected !!