Home » ಎಕ್ಸಲೆಂಟ್ ಕುಂದಾಪುರ: “ ಜೆಇಇ ಮೈನ್ಸ್ ತಾಲ್ಲೂಕಿಗೆ ಪ್ರಥಮ ಸ್ಥಾನ”
 

ಎಕ್ಸಲೆಂಟ್ ಕುಂದಾಪುರ: “ ಜೆಇಇ ಮೈನ್ಸ್ ತಾಲ್ಲೂಕಿಗೆ ಪ್ರಥಮ ಸ್ಥಾನ”

by Kundapur Xpress
Spread the love

ಕುಂದಾಪುರ : ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾದ Joint Entrance Examination Main (ಜೆಇಇ ಮೈನ್ಸ್) ಫಲಿತಾಂಶ ಪ್ರಕಟಗೊಂಡಿದ್ದು, ಕುಂದಾಪುರದ ಎಕ್ಸಲೆಂಟ್ ಕಾಲೇಜ್ ಸುಣ್ಣಾರಿ ಕುಂದಾಪುರ ವಿದ್ಯಾರ್ಥಿಗಳು ಈ ವರ್ಷವೂ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇಡೀ ಕುಂದಾಪುರ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಪರೀಕ್ಷೆಯಲ್ಲಿ 90.539ರಿಂದ 98.235 ಪರ್ಸೆಂಟೈಲ್‌ವರೆಗೆ ಒಟ್ಟು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆಸತ್ಯಪ್ರಸಾದ ಪ್ರಭು 98.235 ಪರ್ಸೆಂಟೈಲ್ ಪಡೆದು ಅಗ್ರಸ್ಥಾನ ಗಳಿಸಿದ್ದಾರೆ. ಮಾನಿಂಗ್ ಶ್ರೀಕಾಂತ್ ಎಂ (97.441), ಜೆ ಎನ್ ಜ್ಞಾನಪುತ್ರನ್ (97.177), ಬಾಲ ಗೌಡ (97.075), ಕೆ ಆರ್ ಹೇಮಂತ್ (96.269), ತನ್ವಿಶ್ರೀ (94.272), ಪ್ರಣವ (94.619), ವಡ್ಡೆ ಮನೋಹರ್ (94.272), ಚರಣ್ ಭಾರಧ್ವಜ್ (93.843), ಪರಿಣಿತ್ ಶೆಟ್ಟಿ (93.502), ಶಾಧನ (93.502), ವಿಕಾಸ್ ಪೂಜಾರಿ (93.795), ಚಿರಾಗ್ ರಮೇಶ್ (93.637), ಕೆ ಶ್ರೀಶ ಶೆಟ್ಟಿ (93.599), ರಾಕೇಶ್ ವಿ (92.890), ಶ್ರೀಶ ವಿ (92.424), ನಿಶಾಂತ್ (92.351), ದಿಲೀಪ್ ಡಿ ಶೆಟ್ಟಿ (92.122), ಭಗತ್ ನಾಯಕ್ (91.339) ಹಾಗೂ ಅನುಪ್ ನಾಯ್ಕ್ (90.539) ಪರ್ಸೆಂಟೈಲ್ ಗಳಿಸಿದ್ದಾರೆ.

ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ಕುಂದಾಪುರ ತಾಲ್ಲೂಕಿಗೆ ಶೈಕ್ಷಣಿಕವಾಗಿ ಗರಿಮೆ ತಂದಿರುವ ಈ ಸಾಧನೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

 

Related Articles

error: Content is protected !!