Home » ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ
 

ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ

by Kundapur Xpress
Spread the love

ಕೋಟೇಶ್ವರ : ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿ ಎಂ ಗುರುರಾಜ ರಾವ್ ಸಿವಿಲ್ ಇಂಜಿನಿಯರ್ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಯು ಆದ ಅವರು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿ ಮಾತನಾಡಿ *ಶಿಕ್ಷಕರ ಮತ್ತು ಪೋಷಕರು ಕಲಿಸಿಕೊಟ್ಟ ಸಂಸ್ಕಾರವನ್ನು ಮೈಗೋಡಿಸಿಕೊಂಡು ಬೆಳೆದರೆ ಜೀವನದ ಎಲ್ಲಾ ಹಂತಗಳಲ್ಲಿ ಯಶಸ್ಸು ಸಾಧ್ಯ ವಿದ್ಯಾರ್ಥಿಗಳು ಪಠ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ತೋರಿದ ಪ್ರತಿಭೆ ಶ್ಲಾಘನೀಯ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸಾಧನೆಗೆ ಇಂತಹ ಪ್ರತಿಭಾ ಪುರಸ್ಕಾರ ಪ್ರೇರಣೆಯಾಗುತ್ತವೆ* ಎಂದು ಅಭಿಪ್ರಾಯ ಪಟ್ಟರು

ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಕೆಪಿಎಸ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಆದ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು ಮಾತನಾಡಿ ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಫಲವೇ ಉತ್ಕೃಷ್ಟ ಸಾಧನೆಗೆ ದಾರಿದೀಪ ಎಂದರು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಶಾಲಾ ಶೈಕ್ಷಣಿಕ ವರದಿಯನ್ನು ಮಂಡಿಸಿದರು ಸಭೆಯಲ್ಲಿ ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ ಎಸ್ ಡಿ ಎಂ ಸಿ ಸದಸ್ಯರುಗಳಾದ ಲೀಲಾ ಮತ್ತು ರೇಷ್ಮಾ ಉಪಸ್ಥಿತರಿದ್ದರು

ದತ್ತಿನಿಧಿ ಪುರಸ್ಕೃತರ ಪಟ್ಟಿಯನ್ನು ಜಯಶ್ರೀ ಗಣೇಶ್ ಭಾಗವತ್ ಶೈಕ್ಷಣಿಕ ಸಾಧಕರ ಪಟ್ಟಿಯನ್ನು ಸಂಧ್ಯಾ ಮತ್ತು ನಾಗರತ್ನ ಸಾಂಸ್ಕೃತಿಕ ಸ್ಪರ್ಧಾ ವಿಜೇತರ ಪಟ್ಟಿಯನ್ನು ಅನುರಾಧ ಮತ್ತು ಸುಧಾಬಾಯಿ ಕ್ರೀಡಾ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸನ್ಮಾನಿತ ಕ್ರೀಡಾಳುಗಳ ಪಟ್ಟಿಯನ್ನು ದಿವ್ಯ ಪ್ರಭ ವಾಚಿಸಿದರು
ಕಾರ್ಯಕ್ರಮವನ್ನು ಶಿಕ್ಷಕಿ ರೇಷ್ಮಾ ನಿರೂಪಿಸಿ ಹಿರಿಯ ಶಿಕ್ಷಕರಾದ ಶ್ರೀಕಾಂತ್ ಸ್ವಾಗತಿಸಿ ಸುಚೇತ ವಿ ಭಟ್ ವಂದಿಸಿದರು

 

Related Articles

error: Content is protected !!