ಕೋಟ : ಶೈಕ್ಷಣಿಕ ಬದುಕಿನೊಂದಿಗೆ ವಿವಿಧ ಸ್ತರದ ಚಟುವಟಿಕೆಯಲ್ಲಿ ವಿದ್ಯಾರ್ಥಿ ಸಮೂಹ ಪಾಲ್ಗೊಳ್ಳಬೇಕು ಆ ಮೂಲಕ ಪ್ರತಿಭೆಗಳು ಅನಾವರಗೊಳ್ಳಲು ಸಹಕಾರಿಯಾಗಲಿದೆ ಎಂದು ಶೈಕ್ಷಣಿಕ ಮಹಾಪೋಷಕ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು.
ಸೋಮವಾರ ಪಡುಕರೆ ಸಂಯುಕ್ತ ಪ್ರೌಢಶಾಲಾ ಮೈದಾನದಲ್ಲಿ ಪದವಿಪೂರ್ವ, ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಕ್ರೀಡಾಕೂಟ ವಿಕ್ಟರಿ – 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯ ಮೂಲಕ ದೈಹಿಕ ಕ್ಷಮತೆಯ ಜತೆಗೆ ಸಾಧನೆಯ ಶಿಖರವೆರಲು ಸಾಧ್ಯ ಈ ದಿಸೆಯಲ್ಲಿ ಗ್ರಾಮೀಣ ಹಳ್ಳಿ ಭಾಗದ ಶೈಕ್ಷಣಿಕ ಕಾಶಿ ಪಡುಕರೆ ಕ್ರೀಡಾ ಪ್ರತಿಭೆಗಳ ಕೇಂದ್ರವಾಗಲಿದೆ ಎಂದರು. ಪರೇಡ್ ವಂದನೆಯನ್ನು ಆನಂದ್ ಸಿ ಕುಂದರ್ ಸ್ವೀಕರಿಸಿದರು. ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಕ್ರೀಡಾ ಧ್ವಜಾರೋಹಣ ಗೈದರು.
ಕ್ರೀಡಾ ಜ್ಯೋತಿಯನ್ನು ಜಟ್ಟಿಗೇಶ್ವರ ದೇಗುಲದಿಂದ ಬೇಳಗಿಕೊಂಡು ರಾಜ್ಯಮಟ್ಟದ ಈಜು ಪಟು ದಿಗಂತ್ ಕೋಟ ಕ್ರೀಡಾಮೈದಾನಕ್ಕೆ ಕರೆತಂದರು. ಕ್ರೀಡಾಜ್ಯೋತಿಯನ್ನು ಉಡುಪಿ ಯುವಜನ ಸೇವೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಿತೇಶ್ ಶೆಟ್ಟಿ ಬೆಳಗಿಸಿದರು. ಸಭಾಧ್ಯಕ್ಷತೆ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಕಾಂಚನ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್ ,ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ನಾಗರಾಜ್ ,ಎಸ್‌ಡಿಎಂಸಿ ನಿಕಟ ಪೂರ್ವ ಅಧ್ಯಕ್ಷ ಜಯರಾಮ ಶೆಟ್ಟಿ,ಗೀತಾನಂದ ಟ್ರಸ್ಟ್ ವೈಷ್ಣವಿ ರಕ್ಷಿತ್ ಕುಂದರ್, ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ ಗಾಂವ್ಕರ್ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಶಿಕ್ಷಕ ಹೆರಿಯ ಮಾಸ್ಟರ್ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಹೊಳ್ಳ ವಂದಿಸಿದರು.
ಗಮನ ಸೆಳೆದ ಪಥಸಂಚಲ
ಸುಮಾರು ಒಂದು ಸಾವಿರದ ನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ ಈ ಸಂಸ್ಥೆಯ ಪುಟಾಣಿಗಳಿಂದ ಹಿಡಿದ ಪದವಿ ವಿದ್ಯಾರ್ಥಿಗಳ ಕ್ರೀಡಾ ಪಥ ಸಂಚಲನದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.