ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀ ಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಯಕ್ಷಗಾನ ವೇಷಭೂಷಣ ತಯಾರಿ ಮತ್ತು ಮುಖವರ್ಣಿಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತೀಚೆಗೆ ಯಡಾಡಿ-ಮತ್ಯಾಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 100 ಎನ್.ಎಸ್.ಎಸ್. ಸ್ವಯಂಸೇವಕರು ಯಕ್ಷಗಾನದ ವೇಷ ಭೂಷಣ ತಯಾರಿ ಮತ್ತು ಮುಖವರ್ಣಿಕೆಯ ಬಗ್ಗೆ ಅರಿತುಕೊಂಡರು.
ಯಕ್ಷಗಾನ ವೇಷಭೂಷಣ ಮತ್ತು ಮುಖವರ್ಣಿಕೆಯ ಬಗ್ಗೆ ಶ್ರೀ ಗಣೇಶ್ ಬಳೆಗಾರ ಜನ್ನಾಡಿ, ಹಿರಿಯ ಯಕ್ಷಗಾನ ವೇಷದಾರಿ ಅಣ್ಣಪ್ಪ ಕುಲಾಲ್ ಜನ್ನಾಡಿ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ನಿಕಾಯಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ನಿರ್ವಹಿಸಿದರು. ಶಿಬಿರಾಧಿಕಾರಿಗಳಾದ ಶ್ರೀ ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್, ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಹರೀಶ್ ಕಾಂಚನ್, ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ, ಶ್ರೀ ಕುಶ ಪೂಜಾರಿ ಯಡಾಡಿ, ಶ್ರೀ ಮಂಜುನಾಥ್ ಮತ್ಯಾಡಿ ಉಪಸ್ಥಿತರಿದ್ದರು.
Categories
ಎನ್ನೆಸ್ಸೆಸ್ ಶಿಬಿರದಲ್ಲಿ ಯಕ್ಷಗಾನ ವೇಷಭೂಷಣ ತಯಾರಿ ಮತ್ತು ಮುಖವರ್ಣಿಕೆ ಕುರಿತು ಪ್ರಾತ್ಯಕ್ಷಿಕೆ