ಕೋಟೇಶ್ವರ : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಹಯೋಗದೊಂದಿಗೆ ರಾಜ್ಯದ 5000 ಶಾಲೆಗಳಲ್ಲಿ ಮಿಷನ್ ಪ್ರಕೃತಿ ಚಟುವಟಿಕೆಯನ್ನು ಆಯೋಜಿಸಲಾಗಿದ್ದು, ಆ ಪೈಕಿ ಅಗ್ರ 10 ಸ್ಥಾನ ಪಡೆದ ಶಾಲೆಗಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ( ಪ್ರೌಢಶಾಲಾ ವಿಭಾಗ ) ಕೋಟೇಶ್ವರ ಕೂಡ ಒಂದು ದಿನಾಂಕ 23.02.2026 ರಂದು ವಿಕಾಸ ಸೌದ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಪ್ರಶಸ್ತಿ ಪ್ರಧಾನ ಮಾಡಿದರು. ಸಾಧನೆಗೈದ ವಿದ್ಯಾರ್ಥಿ ಗಳೊಂದಿಗೆ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು ಈ ಹಿಂದೆ ರಾಷ್ಟ್ರ ಮಟ್ಟದ ಅಟಲ್ ಮ್ಯಾರಥಾನ್ ನಲ್ಲಿ 6ನೇ ಸ್ಥಾನ ಹಾಗೂ ಸಮಗ್ರ ಶಿಕ್ಷಣ ಇಲಾಖೆ ನಡೆಸಿದ ಕಲೋತ್ಸವದ ಕಥೆ ಹೇಳುವ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆ ಈ ವರ್ಷ ಕಲೋತ್ಸವದಲ್ಲಿ ಭರತನಾಟ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಚತುರ್ಥ ಸ್ಥಾನ ಪಡೆದು ಈಗ ಮತ್ತೊಮ್ಮೆ ರಾಜ್ಯಮಟ್ಟದ ಪ್ರಶಸ್ತಿಯೊಂದಿಗೆ ಸಂಸ್ಥೆ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸದ್ದು ಮಾಡಿದೆ
ವಿಜ್ಞಾನ ಶಿಕ್ಷಕರಾದ ಶ್ರೀಕಾಂತ್ ವಿ ಮತ್ತು ಸಂಧ್ಯಾ ಮಾರ್ಗದರ್ಶನ ಮಾಡಿದ್ದರು.
Categories
ರಾಜ್ಯ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾದ ಕೆಪಿಎಸ್ ಕೋಟೇಶ್ವರ