ಬಿಜಾಪುರ : ಛತ್ತೀಸಗಢದಲ್ಲಿ ನಕ್ಸಲೀಯರ ಬೇಟೆಯನ್ನು ಮುಂದುವರೆಸಿರುವ ಭದ್ರತಾ ಪಡೆಗಳು ಗುರುವಾರ ಬಿಜಾಪುರದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ಬೆಳಗ್ಗೆ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಪೊಲೀಸರು, ಸಿಆರ್‌ಪಿಎಫ್‌ನ ಕೋಬ್ರಾ ಪಡೆ ಜಂಟಿಯಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರೊಂದಿಗೆ ತೀವ್ರ ಗುಂಡಿನ ಚಕಮಕಿ ಆರಂಭವಾಗಿ ಸಂಜೆಯವರೆಗೂ ಮುಂದುವರೆದಿತ್ತು
ಸಂಜೆ ಗುಂಡಿನ ಸದ್ದು ನಿಂತ ಬಳಿಕ ಸ್ಥಳ ಪರಿಶೀಲನೆ ವೇಳೆ ಗುಂಡಿನ ಚಕಮಕಿ ನಡೆದ ಜಾಗದಲ್ಲಿ 12 ನಕ್ಸಲರ ಶವಗಳು ಪತ್ತೆಯಾದವು ಎಂದು ಭದ್ರತಾ ಪಡೆಗಳು ತಿಳಿಸಿವೆ. ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎ೦ದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ