Home » 350 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
 

350 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ವಾಹನ ಚಾಲಕನ ಬಂಧನ, ಪೊಲೀಸರಿಂದ ತನಿಖೆ

by Kundapur Xpress
Spread the love

ಐಜ್ವಾಲ್ : ಮಾದಕ ವಸ್ತು ವಿರೋಧಿ ಕಾರ್ಯಾಚರಣೆಯೊಂದರಲ್ಲಿ, ಮಿಜೋರಾಂ ಪೊಲೀಸರು ಸುಮಾರು 350 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.  ಐಜ್ವಾಲ್‌ನ ಅಪರಾಧ ತನಿಖಾ ಇಲಾಖೆ (ವಿಶೇಷ ಶಾಖೆ) ಮತ್ತು ವಿಶೇಷ ಮಾದಕವಸ್ತು ಪೊಲೀಸ್ ಠಾಣೆಯ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿದೆ.

ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಪೊಲೀಸರ ತಂಡ, ಝಮಾಬಾಕ್ ಮತ್ತು ಸೆಲಿಂಗ್ ಬಳಿ ಮಿಥುನ್ ಜಾನುವಾರುಗಳನ್ನು ಹೊತ್ತು ಐಜ್ವಾಲ್ ಗೆ ತೆರಳುತ್ತಿದ್ದ ಪಿಕಪ್ ಟ್ರಕ್ ಅನ್ನು ತಡೆದಿದೆ. ಕೂಲಂಕಷ ತಪಾಸಣೆ ನಡೆಸಿದಾಗ 300 ಕೋಟಿ ಮೌಲ್ಯದ 20.304 ಕೆಜಿ ಕ್ರಿಸ್ಟಲ್ ಮೆಥಾಂಫೆಟಮೈನ್ ಮತ್ತು ಸುಮಾರು 49.56 ಲಕ್ಷ ಮೌಲ್ಯದ 128 ಸೋಪ್ ಕೇಸ್‌ಗಳಲ್ಲಿ ಪ್ಯಾಕ್ ಮಾಡಲಾದ 1.652 ಕೆಜಿ ಹೆರಾಯಿನ್ ಇದ್ದ ಗುಪ್ತ ಕಂಪಾರ್ಟೆಂಟ್ ಪತ್ತೆಯಾಗಿದೆ.

ವಾಹನ ಚಾಲಕ ಐಜ್ವಾಲ್‌ನ ರಿಪಬ್ಲಿಕ್ ಮುಯಲ್ ವೆಂಗ್‌ನ (45) ಬಿ. ಲಾಲಾಜುವಾಲಾನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಜಾಲದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Related Articles

error: Content is protected !!