Home » ಪಾಕ್‌ ಉಗ್ರ ಮುಖದ ಬಣ್ಣ ಬಯಲು ಮಾಡಲು ಪಣ
 

ಪಾಕ್‌ ಉಗ್ರ ಮುಖದ ಬಣ್ಣ ಬಯಲು ಮಾಡಲು ಪಣ

ಪಾಲುದಾರ ರಾಷ್ಟ್ರಗಳಿಗೆ ಸರ್ವಪಕ್ಷದ ನಿಯೋಗ

by Kundapur Xpress
Spread the love

ಹೊಸದಿಲ್ಲಿ : ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಹೊಂದಿರುವ ಸರ್ವಪಕ್ಷಗಳ 7 ನಿಯೋಗಗಳ ನೇತೃತ್ವವನ್ನು ವಹಿಸುವ ನಾಯಕರ ಪೈಕಿ ಆಡಳಿತ ಪಕ್ಷದ ಸಂಸದರಾದ ರವಿಶಂಕರ ಪ್ರಸಾದ್ ಮತ್ತು ಸಂಜಯ್ ಝಾ ಜತೆ ವಿಪಕ್ಷ ನಾಯಕರಾದ ಶಶಿ ತರೂರ್ ಮತ್ತು ಕನಿಮೋಳಿ ಕೂಡ ಒಳಗೊಂಡಿದ್ದಾರೆ.

ಏ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಪ್ರತೀಕಾರದ ಆಪರೇಷನ್ ಸಿಂದೂರ್ ನಂತರ ತನ್ನ ರಾಜತಾಂತ್ರಿಕ ಸಂಪರ್ಕದಲ್ಲಿ ಭಾರತವನ್ನು ಪ್ರತಿನಿಧಿಸುವ ಸಂಸದರ ಹೆಸರುಗಳನ್ನು ಸಂಸದೀಯ ವ್ಯವಹಾರಗಳ ಸಚಿವಾ ಲಯ ಪ್ರಕಟಿಸಿದೆ. ಇತರ ಸಂಸದರಲ್ಲಿ ಎನ್‌ಸಿಪಿ- ಎಸ್‌ಪಿಯ ಸುಪ್ರಿಯಾ ಸುಳೆ, ಬಿಜೆಪಿಯ ಬೈಜಯಂತ್ ಜಯ್ ಪಾಂಡಾ ಮತ್ತು ಶಿವಸೇನೆಯ ಶ್ರೀಕಾಂತ್ ಶಿಂಧೆ ಪ್ರಮುಖರು,

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಎಕ್ಸ್ ಖಾತೆಯಲ್ಲಿ ಪ್ರಕಟಣೆಯನ್ನು ಹಂಚಿಕೊಂಡಿದ್ದು, ಅತ್ಯಂತ ಮುಖ್ಯವಾದ ಕ್ಷಣಗಳಲ್ಲಿ, ಭಾರತ ಒಗ್ಗಟ್ಟಾಗಿದೆ. ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ನಮ್ಮ ಹಂಚಿಕೆಯ ಸಂದೇಶವನ್ನು ಹೊತ್ತುಕೊಂಡು ಹೋಗಲಿವೆ. ರಾಜಕೀಯವನ್ನು ಮೀರಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ ಎಂದು ಬರೆದಿದ್ದಾರೆ.

 

Related Articles

error: Content is protected !!