Home » ಹಿಂದುಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ : ಅಮಿತ್‌ ಶಾ
 

ಹಿಂದುಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ : ಅಮಿತ್‌ ಶಾ

by Kundapur Xpress
Spread the love

ನವದೆಹಲಿ : ‘ಹಿಂದುಗಳು ಎಂದಿಗೂ ಭಯೋತ್ಪಾಕರಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಕೇಂದ್ರ  ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಮತ್ತು  ಚಿದಂಬರಂ ತರಾಟೆಗೆಡ ತೆಗೆದುಕೊಂಡಿದ್ದಾರೆ. ಅಲ್ಲದೆ ಆಕ್ರಮಿತ ಕಾಶ್ಮೀರವನ್ನು ಪಾಕ್‌ ಗೆ ನೀಡಿದ್ದು ಕಾಂಗ್ರೆಸ್ ನಾವು ಅದನ್ನು ಮರಳಿ ಕೈವಶ ಮಾಡಿಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.

ಪಹಲ್ಗಾಮ್ ದಾಳಿಕೋರರು ಭಾರತದವರೇ ಇರಬಹುದು. ಪಾಕ್‌ನವರೆಂದು ಸಾಬೀತಾಗಿಲ್ಲ ಎಂದು ಚಿದಂಬರಂ ಹೇಳಿದ್ದರು. ಇದಕ್ಕೆ ರಾಜ್ಯ ಸಭೆಯಲ್ಲಿ ಆಪರೇಷನ್ ಸಿಂದೂರ ಚರ್ಚೆಗೆ ಉತ್ತರಿಸಿದ ಶಾ, ಹಿಂದು ಭಯೋತ್ಪಾದನೆ ಎಂಬ ಪದವನ್ನು ಯಾರು ಪರಿಚಯಿಸಿದರು ? ಹಿಂದುಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು, 

 

Related Articles

error: Content is protected !!