ಢಾಕಾ : ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಮುಖ್ಯವಾಗಿ ಹಿಂದೂಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗುತ್ತಿದೆ.
ಬಾಂಗ್ಲದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಎವಿ) ಅಧಿಕಾರಕ್ಕೆ ಮರಳುವ ನಿರೀಕ್ಷೆ ಮತ್ತು ಜಮಾತೆ ಇಸ್ಲಾಮಿ ಬಾಂಗ್ಲಾದೇಶದ ರಾಜಕೀಯದಲ್ಲಿ ಮತ್ತೆ ನೆಲೆಯೂರುವ ನಿರೀಕ್ಷೆಯ ಹಿನ್ನೆಲೆ ಬಾಂಗ್ಲಾದೇಶದ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವ ಘಟನೆಗಳು ಹೆಚ್ಚಿವೆ. ಖುಲ್ಲಾ ವಿಭಾಗದ ಮಹರ್ಪುರದ ಇಸ್ಕಾನ್ ದೇವಾಲಯವನ್ನು ಧ್ವಂಸಗೊಳಿಸಿದ ಮತೀಯವಾದಿಗಳು ಬೆಂಕಿ ಹಚ್ಚಿದ್ದಾರೆ.
ಹಿಂದೂ ಅವಾಮಿ ಲೀಗ್ ನಾಯಕ ಹರಧನ್ ಮತ್ತು ಅವರ ಸೋದರಳಿಯ ಮೃತಪಟ್ಟವರಲ್ಲಿ ಮೊದಲಿಗರು ಎನ್ನಲಾಗಿದೆ. ಅವರನ್ನು ಜನರ ಗುಂಪೊಂದು ಹತ್ಯೆ ಮಾಡಿದೆ
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಸನ್ಯಾಲ್ ತಮ್ಮ ಟ್ವಿಟ್‌ನಲ್ಲಿ ಬಾಂಗ್ಲಾದೇಶದ ಹಿಂದೂಗಳಿಗೆ ಏನೋ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾಳಿ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದ್ದು, ನೂರಾರು ಭಕ್ತರು ಬೇರೆಡೆ ಆಶ್ರಯ ಪಡೆಯಬೇಕಾಯಿತು ಎಂದು ವರದಿಗಳು ಹೇಳಿವೆ. ಅಲ್ಲಿನ ಹಿಂದೂಗಳು, ಮತ್ತು ಹಸೀನಾ ಅವರ ಬೆಂಬಲಿಗ ಮುಸ್ಲಿಮರೂ ತಮ್ಮನ್ನು ರಕ್ಷಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ಅಂಗಲಾಚಿಕೊಳ್ಳುತ್ತಿದ್ದಾರೆ.