ನವದೆಹಲಿ: ಅಚ್ಚರಿಯ ರೀತಿಯಲ್ಲಿ ದೆಹಲಿ ಸಿಎಂ ಹುದ್ದೆಗೆ ನಾಮ ನಿರ್ದೇಶನಗೊಂಡಿದ್ದ ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ, ಅವರು ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಹಿರಿಯ ಮುಖಂ ಡರು, ಎನ್‌ಡಿಎ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರೇಖಾ ಗುಪ್ತಾ ಅವರು ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಜತೆಗೆ ಸಂಪುಟ ಸದಸ್ಯರಾಗಿ ಸಿಎಂ ಸ್ಥಾನಾಕಾಂಕ್ಷಿ ಆಗಿದ್ದ ಪರ್ವೇಶ್ ವರ್ಮಾ ಆಶಿಷ್ ಸೂಡಾ, ಮಜಿಂದರ್ ಸಿಂಗ್ ಸಿರ್ಸಾ, ಮಾಜಿ ಆಪ್‌ನಾಯಕ ಕಪಿಲ್ ಮಿಶ್ರಾ, ರವೀಂದರ್ ಇಂದ್ರಜ್ ಸಿಂಗ್ ಮತ್ತು ಪಂಕಜ್ ಸಿಂಗ್ ಅವರೂ ಪ್ರಮಾಣ ಸ್ವೀಕರಿಸಿದ್ದು, ಲೆಫ್ಟಿನೆಂಟ್ ಗವರ್ನ‌್ರವಿ.ಕೆ. ಸಕ್ಸನಾ ಪ್ರಮಾಣವಚನಬೋಧಿಸಿದರು
ರೇಖಾ ಗುಪ್ತಾ ಹಣಕಾಸು ಖಾತೆ ಪಡೆದುಕೊಂಡಿದ್ದರೆ ಪರ್ವೇಶ್ ವರ್ಮಾ ಲೋಕೋಪಯೋಗಿ ಖಾತೆ ಪಡೆಯುವಲ್ಲಿ ಯಶ ಕಂಡಿದ್ದಾರೆ.
ಎನ್‌ಡಿಎ ಬಲಪ್ರದರ್ಶನ :
ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎನ್‌ಡಿಎ ನಾಯಕರಾದ ಮಹಾರಾಷ್ಟ ಸಿಎಂ ದೇವೇಂದ್ರ ಫಡ್ನವೀಸ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಗೋವಾ ಸಿಎಂ ಪ್ರಮೋದ್ ಸಾವಂತ್, ಹರ್ಯಾಣ ಸಿಎಂ ನಯಾಬ್ ಸಿಂಗ್, ನಾಗಾಲ್ಯಾಂಡ್ ಸಿಎಂ ಕೋನರ್ಡ್ ಸಂಗ್ಲಾ, ಉತ್ತರ ಪ್ರದೇಶ ಡಿಸಿಎಂಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಿಜೇಶ್ ಪಾಠಕ್, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಮತ್ತಿತರರೂ ಸಾಕ್ಷಿಯಾದರು

