70
ನವದೆಹಲಿ : ಜೈನ ಧರ್ಮಗುರು ಆಚಾರ್ಯ ವಿದ್ಯಾನಂದ ಜೀ ಮಹಾರಜರ 100ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಧರ್ಮ ಚಕ್ರವರ್ತಿ’ ಎಂಬ ಬಿರುದನ್ನು ಪ್ರದಾನ ಮಾಡಲಾಗಿದೆ.
ಶನಿವಾರ ಕೇಂದ್ರ ಸಂಸ್ಕೃತಿ ಸಚಿವಾಲಯವು ದೆಹಲಿಯ ಭಗವಾನ್ ಮಹಾವೀರ್ ಅಹಿಂಸಾ ಭಾರತಿ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಆಗಮ ಕೀರ್ತಿ ಭಟ್ಟಾರಕ ಮುನಿಗಳು ಮೋದಿಯವರಿಗೆ ಬಿರುದು ನೀಡಿ ಆಶೀರ್ವದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ, ‘ಸಂತರಿಂದ ಏನೇ ಪಡೆದರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ, ನಾನು ಈ ಪ್ರಸಾದವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಅದನ್ನು ಭಾರತಮಾತೆಗೆ ಅರ್ಪಿಸುತ್ತೇನೆ’ ಎಂದರು.

