ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮೊದಲ ದಿನವೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಕ್ಕೆ, ಜನನ ಪೌರತ್ವ ರದ್ದು, ಹವಾಮಾನ, ವಲಸೆ ಸೇರಿಂದತೆ ಹಲವು ಆದೇಶಗಳಿಗೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಇದೇ ವೇಳೆ 2021ರ ಜ.6ರಂದು ದಾಳಿ ಮಾಡಿದ ಅನೇಕರಿಗೆ ಕ್ಷಮಾಧಾನವನ್ನು ನೀಡಿದ್ದಾರೆ.
2024ರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಅನೇಕ ಭರವಸೆಗಳ ಆದೇಶವನ್ನು ಅವರು ಈಡೇರಿಸಿದರು. ಅವುಗಳಲ್ಲಿ ಅಮೆರಿಕ ವಲಸೆ ಮತ್ತು ಪೌರತ್ವವನ್ನು ಹೇಗೆ ಮರು ವಿನ್ಯಾಸ ಮಾಡಲಿದೆ ಎಂಬ ಗುರಿಯ ಹಲವು ಆದೇಶಗಳಿಗೆ ಸಹಿ ಹಾಕಿದರು. ಅದರಲ್ಲಿ ಒಂದು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತನ್ನು ಘೋಷಣೆ ಮಾಡಿದರು. ವಿದೇಶಿ ಅಪರಾಧಿಗಳು ಎಂದು ಕರೆಯುವ ಮೂಲಕ ಸಾಮೂಹಿಕ ಗಡೀಪಾರು ಕಾರ್ಯಾಚರಣೆಗೆ ಭರವಸೆ ನೀಡಿದರು. ಇನ್ನು ಜನನ ಪೌರತ್ವ ಹಕ್ಕನ್ನು ರದ್ದುಗೊಳಿಸುವ ಆದೇಶಕ್ಕೂ ಕೂಡ ಅವರು ಸಹಿ ಹಾಕಿದರು. ಅಮೆರಿಕ ಪೌರತ್ವಕ್ಕಾಗಿ ಅಲ್ಲಿ ಜನಿಸಿದ ಮಕ್ಕಳಿಗೆ ಹಕ್ಕು ನೀಡುವ ಈ ಪೌರತ್ವವನ್ನು ಟ್ರಂಪ್ ರದ್ದು ಮಾಡಿದ್ದಾರೆ