Home » 48 ಗಂಟೆಗಳಲ್ಲಿ 2ನೇ ಬಾರಿ ಪ್ರಧಾನಿ-ದೋವಲ್ ಭೇಟಿ
 

48 ಗಂಟೆಗಳಲ್ಲಿ 2ನೇ ಬಾರಿ ಪ್ರಧಾನಿ-ದೋವಲ್ ಭೇಟಿ

by Kundapur Xpress
Spread the love

ಹೊಸದಿಲ್ಲಿ : ಕಳೆದ 48 ಗಂಟೆಗಳಲ್ಲಿ ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಕೂಲ ದಾಳಿ ಸಂದರ್ಭ ಪರಿಣಾಮಕಾರಿ ನಾಗರಿಕ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 1971ರ ಬಳಿಕ ಇದೇ ಮೊದಲ ಬಾರಿಗೆ ಪರೀಕ್ಷಾರ್ಥ ಕವಾಯತು ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಆದೇಶಿಸಿದೆ. ಕಳೆದೆರಡು ದಿನಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಎಸ್ಎ ದೋವಲ್, ರಕ್ಷಣಾ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಮತ್ತು ಮೂರೂ ಸೇನಾ ಪ್ರಮುಖರೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ.

 

Related Articles

error: Content is protected !!