Home » ಡ್ರೋನ್ ದಾಳಿಯಿಂದ ಪುತಿನ್ ಪಾರು
 

ಡ್ರೋನ್ ದಾಳಿಯಿಂದ ಪುತಿನ್ ಪಾರು

by Kundapur Xpress
Spread the love

ಮಾಸ್ಕೊ : ರಷ್ಯಾದ ಅಧ್ಯಕ್ಷ ವ್ಹಾದಿಮಿರ್ ಪುತಿನ್ ಉಕ್ರೇನ್ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೇ 21ರಂದು ಪುತಿನ್ ಉಕ್ರೇನ್ ಗಡಿಗೆ ಸಮೀಪ ಇರುವ ಕುರ್ಸ್ಕ್‌ ಗೆ ಭೇಟಿ ನೀಡಿದ್ದರು. ಈ ವೇಳೆ ಪುತಿನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗುರಿಯಾಗಿಸಿಕೊಂಡು ಉಕ್ರೇನ್ ದಾಳಿ ನಡೆಸಿತ್ತು. ರಷ್ಯಾ ವಾಯು ರಕ್ಷಣಾ ವ್ಯವಸ್ಥೆ ಡ್ರೋನ್ ಗಳನ್ನು ಹೊಡೆದುರುಳಿಸಿ ಪುತಿನ್ ಹೆಲಿಕಾಪ್ಟರ್ ಅನ್ನು ರಕ್ಷಿಸಿತ್ತು ಎಂದು ರಷ್ಯಾದ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಡ್ರೋನ್ ದಾಳಿ ಕುರಿತು ಉಕ್ರೇನ್ ಮಾಹಿತಿ ನೀಡಿಲ್ಲ, ಆದರೆ ರಷ್ಯಾದಲ್ಲಿರುವ ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ಮತ್ತು ರಷ್ಯಾ ಸೇನೆ ನಡುವೆ ನಿರಂತರವಾಗಿ ಕಾಳಗ ನಡೆಯುತ್ತಿದ್ದು, ಎರಡೂ ಸೇನೆಗಳು ಈ ಪ್ರದೇಶ ತಮ್ಮ ಹಿಡಿತದಲ್ಲಿದೆ ಎಂದು ಪ್ರತಿಪಾದಿಸುತ್ತಿವೆ.

 

Related Articles

error: Content is protected !!