163
ಹೊಸದಿಲ್ಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅಣ್ಣಸ್ತ್ರ ಬೆದರಿಕೆಯನ್ನು ಭಾರತ ಬಲವಾಗಿ ಖಂಡಿಸಿದೆ. ಪಾಕಿಸ್ತಾನದ ಯಾವುದೇ ರೀತಿಯ ಅಣ್ವಸ್ತ್ರ ಬೆದರಿಕೆಗಳಿಗೆ ಭಾರತ ಮಣಿಯುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಅಣ್ವಸ್ತ್ರ ಬೆದರಿಕೆಯೊಂದೇ ಪಾಕಿಸ್ತಾನದ ಬಳಿ ಇರುವ ಅಸ್ತ್ರ ಎಂದು ವಿದೇಶಾಂಗ ಸಚಿವಾಲಯ (ఎంఇఎ) ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಇದರೊಂದಿಗೆ ಪಾಕ್ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಪಾಲಿಸುವುದನ್ನು ಭಾರತ ಸ್ಪಷ್ಟಪಡಿಸಿದೆ. ನಮ್ಮದು ಅಣ್ವಸ್ತ್ರ ರಾಷ್ಟ್ರ, ನಮ್ಮ ಅಸ್ತಿತ್ವಕ್ಕೆ ಏನಾದರೂ ಸಮಸ್ಯೆ ಎದುರಾದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ಧ್ವಂಸ ಮಾಡಲೂ ಸಿದ್ಧರಿದ್ದೇವೆ ಎಂದು ಅಮೆರಿಕ ನೆಲದಿಂದ ಮುನೀರ್ ಭಾರತಕ್ಕೆ ಅಣ್ವಸ್ತ್ರ ಬೆದರಿಕೆ ಯೊಡ್ಡಿದ್ದಾರೆಂದು ದಿ ಪ್ರಿಂಟ್ ಭಾನುವಾರ ವರದಿ ಮಾಡಿತ್ತು.

