ಹೊಸದಿಲ್ಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ನೈಜ ಬಾಸ್ ಎಂದು ಫಿಜಿ ಪ್ರಧಾನಿ ಸಿಟಿವೇನಿಲಿಗಮಾಮಡ ರಬುಕಾ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಪ್ರಧಾನಿ ಮೋದಿ ಜಗತ್ತಿನ ಪರಮೋಚ್ಚ ನಾಯಕ ಎಂದು ರೆಬುಕಾ, ಭಾರತೀಯ ಅಲ್ಪಸಂಖ್ಯಾತರ ಒಕ್ಕೂಟ (ಐಎಂಎಫ್ ) ಸಂಚಾಲಕ ಮತ್ತು ರಾಜ್ಯಸಭಾ ಸದಸ್ಯ ಸತ್ನಮ್ ಸಿಂಗ್ ಸಂಧು ಹಾಗೂ ಐಎಂಎಫ್ ಸಹ ಸಂಸ್ಥಾಪಕ ಹಿಮಾನಿ ಸೂದ್ ಜತೆ ನಡೆದ ಮಾತುಕತೆ ಸಂದರ್ಭ ಕೊಂಡಾಡಿದರು.
ಪ್ರತಿಯೋರ್ವರೂ ಒಟ್ಟಾಗಿ ಅಭಿವೃದ್ಧಿಯಾಗಬೇಕು ಮತ್ತು ಸಂಪನ್ನರಾಗಬೇಕೆಂಬುದು ಪ್ರಧಾನಿ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧೈಯಮಂತ್ರದ ಆಶಯ. ಮೋದಿಯವರು ಕರೆ ನೀಡಿರುವ, ಕೃತಿಗಿಳಿಸಿರುವ ಸಮಸ್ತರ ಸಮಗ್ರ ಕಲ್ಯಾಣೋದ್ದೇಶದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಉಚ್ಚ ಆಡಳಿತ ಮಾದರಿಯಾಗಿದೆ.
ಜಗತ್ತು ಬದುಕಿಗೆ ನೆಮ್ಮದಿಯ ತಾಣವಾಗುವ ನಿಟ್ಟಿನಲ್ಲಿ ಮೋದಿಯವರ ಈ ಧೈಯವಾಕ್ಯವನ್ನು ಖಂಡಿತವಾಗಿ ಪಾಲಿಸಬೇಕು, ಅನುಷ್ಟಾನಿಸಬೇಕೆಂದು ರೆಬುಕಾ ಕರೆಯಿತ್ತಿದ್ದಾರೆ.
ಫಿಜಿ ಭಾರತದ ಸ್ನೇಹಬಾಂಧವ್ಯದಿಂದ, ಮೋದಿಯವರ ಶಾಂತಿ ಸಂದೇಶಗಳಿಂದ ಗಟ್ಟಿಯಾಗಿದೆ ಎಂಬ ತನ್ನ ಸಂದೇಶ ತನ್ನ ಮಿತ್ರನಿಗೆ ತಲುಪುವುದೆಂದು ತಾನು ನಂಬಿದ್ದೇನೆ. ನಮ್ಮ ಶಾಂತಿಯ ಪಯಣಕ್ಕೆ ನಾವಿಂದಿಗೂ ಬದ್ಧರಿದ್ದೇವೆ. ಈ ಹಾದಿಯಲ್ಲಿ ಪ್ರಧಾನಿ ಮೋದಿ ಬಲು ದೂರ ಕ್ರಮಿಸಿಯಾಗಿದೆ. ಅಭಿವೃದ್ಧಿ ಪಥದಲ್ಲಿ ಒಗ್ಗಟ್ಟಾಗಿರುವುದು, ನಮ್ಮ ಪ್ರಗತಿ ಹಾದಿಯಲ್ಲೂ ಏಕತೆಯಿಂದ ಹೆಜ್ಜೆಯಿಡುವುದು ಇವೆಲ್ಲ ಜಾಗತಿಕ ನಾಯಕರಿಗೆ ಮಹಾನ್ ಆದರ್ಶಗಳೆಂದು ರೆಬುಕಾ ಬಣ್ಣಿಸಿದ್ದಾರೆ.