ಹೊಸದಿಲ್ಲಿ: ಭಾರತದ ಇತಿಹಾಸ ಪ್ರಸಿದ್ದ ವೈದ್ಯನೆಂದೇ ಹೆಸರುವಾಸಿಯಾಗಿರುವ ಧನ್ವಂತರಿ ನೆನಪಿನಲ್ಲಿ ಆಚರಿಸುವ ಆಯುರ್ವೇದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು, 70 ವರ್ಷ ಮೀರಿದವರ ಆಯುಷ್ಮಾನ್ ವಯ ವಂದನಾ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಇಲಾಖೆಯ 5,502 ಕೋಟಿ ರೂ ಔಷಧ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ 5,187 ಕೋಟಿ ರೂ., ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ 1,641 ಕೋಟಿ ರೂ. ಮತ್ತು ಆಯುಷ್ ಇಲಾಖೆಯ 525.14 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಎನಿದು ಆಯುಷ್ಮಾನ್ ವಯ ನಂದನಾ ?
ಇದು ಈಗಾಗಲೇ ಇರುವ ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಿತ ಭಾಗವಾಗಿದ್ದು, ಇದರಲ್ಲಿ 70 ವರ್ಷ ಮೀರಿದ ದೇಶದ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಅಂದರೆ ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಈ ಯೋಜನೆ ಲಭ್ಯವಾಗಲಿದೆ ಈ ಯೋಜನೆಯಲ್ಲಿ ವಾರ್ಷಿಕವಾಗಿ 5 ಲಕ್ಷ ರೂಪಾಯಿಯ ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.