Home » ಇರಾನ್‌ ಅಣುಸ್ಥಾವರಕ್ಕೆ ಬಾಂಬ್
 

ಇರಾನ್‌ ಅಣುಸ್ಥಾವರಕ್ಕೆ ಬಾಂಬ್

40‌ ವಿಮಾನ 100 ಬಾಂಬ್‌ ಬಳಸಿ ಇಸ್ರೇಲ್‌ ದಾಳಿ

by Kundapur Xpress
Spread the love

ಟೆಲ್ ಅವೀವ್ : ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಏಳನೇ ದಿನವಾದ ಗುರುವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇರಾನ್‌ನ ಪರಮಾಣು ಸ್ಥಾವರ ಗುರಿಯಾಗಿಸಿ ಇಸ್ರೇಲ್ ಭೀಕರ ದಾಳಿ ನಡೆಸಿದ್ದರೆ, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಸೇನಾ ಆಸ್ಪತ್ರೆ ಮತ್ತು ಷೇರು ಮಾರುಕಟ್ಟೆ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಎರಗಿದೆ.

ಜತೆಗೆ ‘ಇರಾನ್ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಅವರು ಬದುಕಿರಬಾರದು. ಅವರ ನಿರ್ಮೂಲನೆಯೇ ನಮ್ಮ ಯುದ್ಧದ ಗುರಿ. ಅದನ್ನು ಸಾಧಿಸಲು ಈಗಾಗಲೇ ಸೇನೆಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಘೋಷಿಸಿದ್ದಾರೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ಯುದ್ಧ ಮತ್ತಷ್ಟು ಘನಘೋರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ

 

Related Articles

error: Content is protected !!