ಇಟಲಿ : ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಸೌಹಾರ್ದ ಭೇಟಿ ನಡೆಯಿತು. ವಾಣಿಜ್ಯ, ಇಂಧನ, ರಕ್ಷಣೆ, ಟೆಲಿಕಾಂ ಮತ್ತಿತರ ರಂಗಗಳಲ್ಲಿ ಭಾರತ-ಇಟಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಯಾಗಿದೆ ಭವಿಷ್ಯದಲ್ಲಿ ಜೈವಿಕ ಇಂಧನ, ಆಹಾರ ಸಂಸ್ಕರಣೆ ಮತ್ತು ಅಪೂರ್ವ ಖನಿಜ ರಂಗಗಳಲ್ಲೂ ನಮ್ಮ ರಾಷ್ಟ್ರಗಳು ಜತೆಗೂಡಿ ದುಡಿಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ ಮಾತುಕತೆ ನಂತರ ಎಕ್ಸ್ಗೆ ಹಾಕಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಇಡೀ ದಿನ ಅಪುಲಿಯಾ ಭೇಟಿಯಲ್ಲಿದ್ದ ಪ್ರಧಾನಿ ಮೋದಿ, ಮುಕ್ತಾಯ ಹಂತದಲ್ಲಿ ಇಟಲಿ ಪ್ರಧಾನಿಯನ್ನು ಕಂಡು, ಜಿ7 ಶೃಂಗಸಭೆಗೆ ಆಮಂತ್ರಣ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು ನಂತರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮೋದಿ ಜೊತೆ ಸೆಲ್ಫಿ ತೆಗೆಸಿಕೊಂಡರು