Home ರಾಷ್ಟ್ರೀಯ ಸುದ್ದಿವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ

ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ

by Kundapur Xpress

ಮುಂಬೈ : ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್ ಸೈಕಲ್ ನ್ನು ಬಜಾಜ್ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೈಕ್‌ ಬಿಡುಗಡೆ ಮಾಡಿದರು. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ 95 ಸಾವಿರ ರು. ನಿಂದ ಆರಂಭವಾಗಲಿದೆ.

ಈ ಬೈಕ್ ಪೆಟ್ರೋಲ್ ಹಾಗೂ ಸಿಎನ್‌ಜಿನಿಂದಲೂ ಚಲಿಸುತ್ತದೆ. ಚಾಲಕರು ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.          1 ಕೇಜಿ ಸಿಎನ್‌ಜಿಗೆ 102 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಫ್ರೀಡಂ ಎನ್‌ಜಿಒ 4 ಡ್ರಮ್ ಬೈಕ್ ಬೆಲೆ ರೂ.  95,000, ಮಿಡ್-ಸ್ಪೆಕ್ ಎನ್‌ಜಿಒ 4 ಡ್ರಮ್ ಎಲ್‌ಇಡಿ ಬೈಕ್ ಬೆಲೆ 1.05 ಲಕ್ಷ ಹಾಗೂ ಟಾಪ್-ಸ್ಪೆಕ್ ಎನ್‌ಜಿಒ4 ಡಿಸ್ಕ್ ಎಲ್ ಇ ಡಿ ಬೈಕ್ ಬೆಲೆ * 1.10 ಲಕ್ಷ ಬೆಲೆ ಇದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಬುಕ್ಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ.

Related Articles