141
ಲಖನೌ : ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ 2025, ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಆದಾಯ ಸೇರಿಸುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈಗಾಗಲೇ 50 ಕೋಟಿಗೂ ಅಧಿಕ ಭಕ್ತರನ್ನು ಆಕರ್ಷಿಸಿರುವ ಈ ಧಾರ್ಮಿಕ ಸಂಗಮಕ್ಕಾಗಿ ಮೂಲಸೌಕರ್ಯ ಕಲ್ಪಿಸಲು. ಯೋಗಿ ಸರ್ಕಾರ ಸುಮಾರು 1,500 ಕೋಟಿ ರೂ. ಖರ್ಚು ಮಾಡಿದೆ
ಮಾನವನ ಇತಿಹಾಸದಲ್ಲಿಯೇ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿ ದೊಡ್ಡ ಮೇಳ ಇದಾಗಿದ್ದು, ದೇಶ- ವಿದೇಶಗಳಿಂದಲೂ ಭಕ್ತ ಸಾಗರ ಹರಿದು ಬರುತ್ತಿದೆ. ಈ ನಡುವೆಯೇ ಮಹಾ ಕುಂಭಮೇಳದ ಅವಧಿ ವಿಸ್ತರಿಸುವಂತೆ ಮಾಜಿ ಸಿಎಂ ಅಖಿಲೇಶ್ ಯಾದವ್ ಅಚ್ಚರಿ ಹೇಳಿಕೆ ನೀಡಿದ್ದಾರೆ

